ಹಳೆಯಂಗಡಿ ಬಿಲ್ಲವ ಸಮಾಜ ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ: ಸಮಾಜ ಮುಖಿ ಚಿಂತನೆಗಳೊಂದಿಗೆ ಸಂಘ ಸಂಸ್ಥೆಗಳು ಪಾರದರ್ಶಕವಾಗಿದ್ದಲ್ಲಿ ಸಮಾಜದ ಸಹಕಾರವೂ ಗರಿಷ್ಠವಾಗಿ ಸಿಗುತ್ತದೆ ಎಂದು ಹಳೆಯಂಗಡಿ ಲಯನ್ಸ್ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಯಶೋಧರ ಸಾಲ್ಯಾನ್ ಹೇಳಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಧಾರ್ಮಿಕ ಚಿಂತಕ ಹೆಜಮಾಡಿ ಮಹೇಶ್ ಶಾಂತಿ ಅಶೀರ್ವಚನಗೈದರು.
ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆ ವಹಿಸಿದ್ದರು.
ಕಟ್ಟಡ ಸಮಿತಿ ಅಧ್ಯಕ್ಷ ಮೋಹನ್ ಸುವರ್ಣ, ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ಮುಂಬಯಿ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ್ ಎನ್., ಕಾರ್ಯದರ್ಶಿ ವಿಶ್ವನಾಥ ಸಾಲ್ಯಾನ್, ಸಲಹಾ ಸಮಿತಿ ಸದಸ್ಯರಾದ ಚಂದಯ್ಯ ಬಿ. ಕರ್ಕೇರ, ಚಂದ್ರಹಾಸ್, ಸದಾನಂದ ಸಾಲ್ಯಾನ್ ಮಸ್ಕತ್, ಧನ್‌ರಾಜ್ ಕೋಟ್ಯಾನ್ ಸಸಿಹಿತ್ಲು, ಬ್ರಿಜೇಶ್‌ಕುಮಾರ್, ದೀಪಕ್ ನಾನಿಲ್, ಯುವವಾಹಿನಿ ಘಟಕದ ಅಧ್ಯಕ್ಷ ಶರತ್‌ಕುಮಾರ್, ಕಾರ್ಯದರ್ಶಿ ಚಂದ್ರಿಕಾ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಹಿಮಕರ್ ಟಿ. ಸುವರ್ಣ ಕಲ್ಲಾಡಿ ಸ್ವಾಗತಿಸಿದರು, ಕೋಶಾಧಿಕಾರಿ ರಮೇಶ್ ಬಂಗೇರ ವಂದಿಸಿದರು, ಕಟ್ಟಡ ಸಮಿತಿ ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್ ನಿರೂಪಿಸಿದರು.

Kinnigoli-08051805

Comments

comments

Comments are closed.

Read previous post:
Kinnigoli-08051804
ಬಾಯಾರು ರಘುನಾಥ ಶೆಟ್ಟಿ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿಗುತ್ತುವಿನಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಕಲಾವಿದ ಬಾಯಾರು ರಘುನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳದ...

Close