ಕಟೀಲು ಪ.ಪೂ.ಕಾಲೇಜು 88ಶೇ. ಫಲಿತಾಂಶ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 88% ಫಲಿತಾಂಶ ಬಂದಿದೆ.
ಒಟ್ಟು 419 ವಿದ್ಯಾರ್ಥಿಗಳಲ್ಲಿ 86 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 213 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗ 72%, ವಾಣಿಜ್ಯ ವಿಭಾಗ 92% ಹಾಗೂ ವಿಜ್ಞಾನ ವಿಭಾಗ 90% ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ಮನು ಕಶ್ಯಪ್ (582), ವಾಣಿಜ್ಯ ವಿಭಾಗದಲ್ಲಿ ಚಿತ್ರಾಕ್ಷಿ (582), ಕಲಾ ವಿಭಾಗದಲ್ಲಿ ವೃಂದಾ (507) ಅತ್ಯಂತ ಹೆಚ್ಚು ಅಂಕ ಪಡೆದಿದ್ದಾರೆ.

Comments

comments

Comments are closed.