ಕಟೀಲು ಯಕ್ಷಗಾನ ಕಲಾವಿದರಿಗೆ ಸಮ್ಮಾನ

ಕಿನ್ನಿಗೋಳಿ: ಯಕ್ಷಗಾನ ಕಲೆ ಧಾರ್ಮಿಕ ಭೋಧನೆಯ ಜೊತೆಗೆ ಸಾಂಸ್ಕೃತಿಕವಾಗಿ ಜನರನ್ನು ಸುಸಂಸ್ಕೃತರನ್ನಾಗಿಸಿದೆ ಎಂದು ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಕಟೀಲು ದೇವಳದ ರಥಬೀದಿಯಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಕಲಾವಿದರನ್ನು ಗೌರವಿಸುವ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಟೀಲು ದೇವಳ ಅರ್ಚಕ ಹರಿನಾರಾಯಣ ಆಸ್ರಣ್ಣ ಅಭಿನಂಧನಾ ಭಾಷಣಗೈದರು
ಈ ಸಂದರ್ಭ ಮೇಳದ ಹಿರಿಯ ಕಲಾವಿದರಾದ ಬಾಬು ಕುಲಾಲ್, ಅಪ್ಪು ಕುಂಜ ಮಣಿಯಾಣಿ, ಶಶಿಧರ ಪಂಜ, ವಿಠಲಶೆಟ್ಟಿ ಸರಪಾಡಿ ಅವರನ್ನು ಸನ್ಮಾನಿಸಲಾಯಿತು.
ಮುಂಬಯಿ ಉದ್ಯಮಿ ಕೃಷ್ಣ ಶೆಟ್ಟಿ, ಸದಾನಂದ ಶೆಟ್ಟಿ, ನಿತ್ಯಾನಂದ ಶೆಟ್ಟಿ, ದಾಮೋದರ್ ಶೆಟ್ಟಿ ಕಲ್ಯಾಣ್, ಜಯಂತ ಸೇನವ, ಗುರುಪ್ರಸಾದ್ ಶೆಟ್ಟಿ ಮಾಧವ ಕೈಯ, ದಾಮಣ್ಣ ಶೆಟ್ಟಿ ದೇವಸ್ಯ, ಭಾಸ್ಕರ ದಾಸ ಎಕ್ಕಾರು, ಪ್ರದೀಪ್ ಶೆಟ್ಟಿ ಮುಂಬಯಿ, ದಿವಾಕರ ಶೆಟ್ಟಿ ಕೆ. ಜಿ. ಬೆಟ್ಟು, ಶೇಖರ ಶೆಟ್ಟಿ ಬೆಂಗಳೂರು, ದಯಾನಂದ ಶೆಟ್ಟಿ ಕೆ. ಜಿ. ಬೆಟ್ಟು, ಸುಧಾಕರ ಶೆಟ್ಟಿ ಮುಂಬಯಿ, ನಾಗರಾಜ ಶೆಟ್ಟಿ ಮುಂಬಯಿ, ಕಿರಣ್ ರೈ, ದೇವಿಪ್ರಸಾದ್ ಶೆಟ್ಟಿ, ನಿತ್ಯಾನಂದ ರೈ, ಸುರೇಶ್ ಶೆಟ್ಟಿ ಮರವೂರು ಬೀಡು, ಸತೀಶ್ ಶೆಟ್ಟಿ ಮರವೂರು ಬೀಡು, ವಿಜಯ್ ಶೆಟ್ಟಿ ಮುಂಬಯಿ, ಸಚಿನ್ ಶೆಟ್ಟಿ ಮುಂಬಯಿ, ಮನೋಹರ ಶೆಟ್ಟಿ ಕೊರೆದು, ಮಹಾಬಲ ಶೆಟ್ಟಿ ಕೊರೆದು, ರವಿ ಶೆಟ್ಟಿ ದೇವಸ್ಯ ಮುಂಬಯಿ, ಉಮೇಶ್ ಶೆಟ್ಟಿ ದೇವಸ್ಯ, ಜಯರಾಮ ಶೆಟ್ಟಿ, ಪ್ರದೀಪ್ ಆಳ್ವ ಬಂಬ್ರಾಣ, ದೂಮಣ್ಣ ಶೆಟ್ಟಿ ಕಲ್ಯಾಣ್, ರವೀಂದ್ರ ಮೆಂಡ ಮಣೇಲ್ ಅವರನ್ನು ಗೌರವಿಸಲಾಯಿತು.
ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಕಲಾ ಸಂಘಟಕ ಭಾಸ್ಕರ ಆಳ್ವ, ಉದ್ಯಮಿ ಗಂಗಾಧರ ಆಳ್ವ, ಕಾವೇಶ್ವರ ದೇವಳದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿ, ಮುಂಬಯಿ ಉದ್ಯಮಿಗಳಾದ ಕಲಾಧರ ಶೆಟ್ಟಿ, ಜೋತಿಷಿ ಉಮೇಶ್ ಗುರೂಜಿ, ಧನಂಜಯ ಶೆಟ್ಟಿ, ಗಂಗಾಧರ ಆಳ್ವ, ಸಂಘಟಕ ಉದ್ಯಮಿ ಭಾಸ್ಕರ ಆಳ್ವ ಮುಂಬಯಿ, ಅಮಿತಾ ಭಾಸ್ಕರ ಆಳ್ವ, ರಚನ್ ಆಳ್ವ ಮುಂಬಯಿ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ಶಾಲಾ ನಿವೃತ್ತ ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-08051801

Comments

comments

Comments are closed.

Read previous post:
Kinnigoli-04051802
ಸಂಘಟನೆಯಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ

ಕಿನ್ನಿಗೋಳಿ : ಸಂಘಟನೆಯಿಂದ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಸಂಘಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೆರವಿಗೆ ತಲುಪಿದಲ್ಲಿ ಮಾತ್ರ ಸಂಘಗಳು ಉಳಿಯಲು ಸಾಧ್ಯ. ಯುವ ಸಮುದಾಯವನ್ನು ಸೆಳೆಯುವ ಕಾರ್ಯಕ್ರಮವನ್ನು...

Close