ಅತ್ತೂರು ಗೋಳಿದಡಿ ಪೂರ್ವಭಾವಿ ಸಭೆ

ಕಿನ್ನಿಗೋಳಿ : ನೂತನ ದೈವ, ದೇವಳ ನಿರ್ಮಿಸುವುದಕ್ಕಿಂತ ಹಳೆಯ ದೈವ, ದೇವಳಗಳನ್ನು ಜೀರ್ಣೋದ್ದಾರಗೊಳಿಸುವುದು ಉತ್ತಮ ಎಂದು ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು ಹೇಳಿದರು.
ಅತ್ತೂರು ಮಾಗಣೆಯ ಗೋಳಿದಡಿ ಸಮೀಪ ಅಜೀರ್ಣಾವಸ್ಥೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಳ ಜೀರ್ಣೋದ್ದಾರದ ಪೂರ್ವಭಾವಿ ಸಮಾಲೋಚನ ಸಭೆಯಲ್ಲಿ ಮಾತನಾಡಿ ನಮ್ಮ ಹಿರಿಯರು ದೇವಳ ಇದ್ದ ಬಗ್ಗೆ ಹೇಳುತ್ತಿದ್ದರು ಅಲ್ಲದೆ ಮಾಗಣೆಯ ಅನೇಕ ಕಡೆಗಳಲ್ಲಿ ನಡೆದ ಪ್ರಶ್ನೆಗಳಲ್ಲಿ ದೇವಳದ ಕುರುಹು ಬಗ್ಗೆ ತಿಳಿದು ಬಂದಿದೆ
ಎಂದರು.
ಅತ್ತೂರು ಬೈಲು ವೆಂಕಟರಾಜ ಉಡುಪ ಮಾತನಾಡಿ ದೇವಳದ ಜೀರ್ಣೋದ್ದಾರ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ, ಇದರಿಂದ ನಮ್ಮ ಮಾಗಣೆಯ ಭಕ್ತರ ಸರ್ವ ದೋಷ ನಿವಾರಣೆಯಾಗಲಿದೆ ಎಂದರು.
ಮುಂದಿನ ಮೇ 27 ಮತ್ತು 28 ರಂದು ದೈವಜ್ಞ ಪದ್ಮರಾಮ ಶರ್ಮ ಹಾಗೂ ಮದೂರು ರಂಗ ಭಟ್ಟರ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆಯನ್ನು ಮಾಡುವುದೆಂದು ತೀರ್ಮಾನಿಸಲಾಯಿತು.
ಈ ಸಂದರ್ಭ ಪ್ರಸನ್ನ ಎಲ್. ಶೆಟ್ಟಿ ಅತ್ತೂರಗುತ್ತು, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ಶಾಮರಾಯ ಶೆಟ್ಟಿ ಗೋಳಿದಡಿ, ಮಹಾಬಲ ಶೆಟ್ಟಿ ಪಡುಮನೆ, ಸುರೇಶ್ ಶೆಟ್ಟಿ ದೇವಸ್ಯ, ಶ್ರೀಧರ ಶೆಟ್ಟಿ ಬಾಂಜಾಲಗುತ್ತು, ಶಂಕರ ಶೆಟ್ಟಿ ಮೂಡ್ರಗುತ್ತು, ಪ್ರಶಾಂತ್ ಮಾಡರ ಮನೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-10051803

Comments

comments

Comments are closed.

Read previous post:
Kinnigoli-10051802
ಕಿನ್ನಿಗೋಳಿ ಬಿಜೆಪಿ ಮಹಿಳಾ ಮೋರ್ಚಾ ಜಾಥಾ

ಕಿನ್ನಿಗೋಳಿ : ಬಿಜೆಪಿ ಮಹಿಳಾ ಮೋರ್ಚದಿಂದ ಮಂಗಳವಾರ ಕಿನ್ನಿಗೋಳಿಯ ರಾಜಾಂಗಣದಿಂದ ಕಿನ್ನಿಗೋಳಿ ಚರ್ಚ್ ವರೆಗೆ ಜಾಥಾ ನಡೆಯಿತು.

Close