ಕಿನ್ನಿಗೋಳಿ : ಬಿಜೆಪಿ ರೋಡ್ ಶೋ

ಕಿನ್ನಿಗೋಳಿ : ಕಾಂಗ್ರೆಸ್ ಮುಕ್ತ ಭಾರತದ ನಿರ್ಮಾಣದಲ್ಲಿ ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಅವಿರತ ಶ್ರಮಿಸಿದಾಗ ಜಯ ನಮ್ಮದಾಗಲಿದೆ. ಈಗಾಗಲೇ ಉತ್ತರ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಆಡಳಿತ ಕಂಡಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಮೂಲಕ ದಕ್ಷಿಣ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಬಾರತದ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕು ಎಂದು ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಕರಾವಳಿ ಕರ್ನಾಟಕದ ಬಿಜೆಪಿ ಉಸ್ತುವಾರಿ ಡಾ. ಮಹೇಂದ್ರ ಸಿಂಗ್ ಹೇಳಿದರು.
ಕಿನ್ನಿಗೋಳಿಯ ಪೇಟೆಯಲ್ಲಿ ಗುರುವಾರ ನಡೆದ ಬಿಜೆಪಿ ರೋಡ್ ಶೋ ಹಾಗೂ ಕೊನೆಯ ದಿನ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ದನಾಗಿದ್ದೇನೆ. ಕೊನೆಗಳಿಗೆಯವರೆಗೆ ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರು ನಿಗಾ ವಹಿಸಿ ಬಿಜೆಪಿ ಪಕ್ಷದ ಜಯಕ್ಕಾಗಿ ಸನ್ನದ್ದರಾಗಬೇಕು. ಈ ಗೆಲವು ಕಾರ್ಯಕರ್ತರ ಗೆಲವು ಎಂದು ಹೇಳಿದರು.
ದಕ. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಸ್ವಾರ್ಥ ಹಾಗೂ ದ್ವೇಷದ ರಾಜಕಾರಣ ತಿಲಾಂಜಲಿಗೊಳಿಸಿ ಪಾರದರ್ಶಕ ಸ್ವಚ್ಚ ಆಡಳಿತಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಈ ಸಂದರ್ಭ ವಿಶ್ವನಾಥ್ ಶೆಟ್ಟಿ, ಸುಧಾಕರ್ ಶೆಟ್ಟಿ, ಆಶೋಕ್ ಬಿಜೆಪಿ ಸೇರ್ಪಡೆಗೊಂಡರು.

ಬಿಜೆಪಿ ಮುಖಂಡರಾದ ಕೆ. ಆರ್.ಪಂಡಿತ್, ಈಶ್ವರ್ ಕಟೀಲು, ಸುಚರಿತ ಶೆಟ್ಟಿ, ಬ್ರಿಜೇಶ್ ಚೌಟ, ಮಾಜಿ ಎಂಎಲ್‌ಸಿ ಬಾಲಕೃಷ್ಣ ಭಟ್, ಸುದರ್ಶನ್ ಎಂ., ರಮಾನಾಥ ಅತ್ತರ್, ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ದಿವಾಕರ ಸಾಮಾನಿ, ಸಂದೇಶ್ ಶೆಟ್ಟಿ, ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-10051804 Kinnigoli-10051805 Kinnigoli-10051806 Kinnigoli-10051807

Comments

comments

Comments are closed.

Read previous post:
Kinnigoli-10051803
ಅತ್ತೂರು ಗೋಳಿದಡಿ ಪೂರ್ವಭಾವಿ ಸಭೆ

ಕಿನ್ನಿಗೋಳಿ : ನೂತನ ದೈವ, ದೇವಳ ನಿರ್ಮಿಸುವುದಕ್ಕಿಂತ ಹಳೆಯ ದೈವ, ದೇವಳಗಳನ್ನು ಜೀರ್ಣೋದ್ದಾರಗೊಳಿಸುವುದು ಉತ್ತಮ ಎಂದು ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು ಹೇಳಿದರು. ಅತ್ತೂರು ಮಾಗಣೆಯ ಗೋಳಿದಡಿ ಸಮೀಪ ಅಜೀರ್ಣಾವಸ್ಥೆಯಲ್ಲಿರುವ...

Close