ಕಟೀಲು ವಸಂತವೇದ ಶಿಬಿರ ಸಮಾರೋಪ

ಕಿನ್ನಿಗೋಳಿ: ಸಂಸ್ಕಾರಯುತ ಬದುಕನ್ನು ಹಿರಿಯರು ಮಕ್ಕಳಲ್ಲಿ ರೂಪಿಸಲು ಆಸಕ್ತಿ ವಹಿಸಬೇಕು ಎಂದು ಕಟೀಲು ದೇವಳ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಸಂಜೀವನಿ ಟ್ರಸ್ಟ್ ಮುಂಬೈ, ನಂದಿನಿ ಬ್ರಾಹ್ಮಣ ಸಭಾದ ವತಿಯಿಂದ ಶ್ರೀ ದುರ್ಗಾಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಜೀವನಿ ಟ್ರಸ್ಟ್ ನ ಡಾ. ಸುರೇಶ್ ರಾವ್, ನಂದಿನಿ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಡಾ. ಪದ್ಮನಾಭ ಭಟ್, ಕಟೀಲು ವಿದ್ಯಾಸಂಸ್ಥೆಗಳ ಸಂಯೋಜಕ ಕೆ. ಎಸ್. ಶೆಟ್ಟಿಗಾರ್, ಸಂಸ್ಕೃತ ಕಾಲೇಜು ಪ್ರಿನ್ಸಿಪಾಲ್ ಡಾ. ಪದ್ಮನಾಭ ಮರಾಠೆ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ನಾಗರಾಜ ಸ್ವಾಗತಿಸಿದರು. ಶಿಕ್ಷಕ ಶ್ರೀವತ್ಸ ವಂದಿಸಿದರು.

Kinnigoli-12051801

Comments

comments

Comments are closed.

Read previous post:
Kinnigoli-10051806
ಕಿನ್ನಿಗೋಳಿ : ಬಿಜೆಪಿ ರೋಡ್ ಶೋ

ಕಿನ್ನಿಗೋಳಿ : ಕಾಂಗ್ರೆಸ್ ಮುಕ್ತ ಭಾರತದ ನಿರ್ಮಾಣದಲ್ಲಿ ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಅವಿರತ ಶ್ರಮಿಸಿದಾಗ ಜಯ ನಮ್ಮದಾಗಲಿದೆ. ಈಗಾಗಲೇ ಉತ್ತರ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಆಡಳಿತ ಕಂಡಿದ್ದೇವೆ....

Close