ಹಳೆಯಂಗಡಿ-ಕಿನ್ನಿಗೋಳಿ : ಮತದಾರರ ಉತ್ಸಾಹ

ಕಿನ್ನಿಗೋಳಿ: ಮೂಲ್ಕಿ ಹೋಬಳಿಯ ಹಳೆಯಂಗಡಿಯಲ್ಲಿ ಮತದಾನಕ್ಕೆ ವಯೋ ವೃದ್ಧರಿಗೆ ಸಹಾಯಕರಾಗಿ ಯುವಕರು ಸಹಾಯ ಮಾಡುತ್ತಿರುವುದು ಕಡು ಬಂತು. ಸಸಿಹಿತ್ಲು ಮತದಾನದ ಕೇಂದ್ರದಲ್ಲಿ ಮಧ್ನಾಹ್ಯ ಮತದಾರರಿಲ್ಲದೇ ಬಿಕೋ ಎನ್ನುತ್ತಿದ್ದವು.
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ 141ನೇ ಬೂತ್‌ನಲ್ಲಿ ಈ ಹಿಂದೆ ಹಲವು ಬಾರಿ ಮತದಾನ ಮಾಡಿದ್ದ ಹರಿವಿಜಯ ಶೆಣೈಯವರು ತಮ್ಮ ಪತ್ನಿಯೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಸಿಹಿತ್ಲು ಬೂತ್ ನಂ.144 ಮತ್ತು 145ರಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳೇ ಶಾಮಿಯಾನ ಮತ್ತು ಕುರ್ಚಿಗಳನ್ನು ಹಾಕಲು ಮುಂದಾಗಿದ್ದನ್ನು ಬೂತ್ ಅಧಿಕಾರಿ ನಿರಾಕರಿಸಿದರು. ಅದರೆ ಹಳೆಯಂಗಡಿ ಗ್ರಾಮ ಪಂಚಾಯಿತಿಯ ಬೂತ್ ನಂ. 141ರಲ್ಲಿ ಶಾಮಿಯಾನ ಕುರ್ಚಿಯನ್ನು ಹಾಕಲು ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ.
ಕಿನ್ನಿಗೋಳಿ ಮತ್ತು ಕಟೀಲು ಪ್ರದೇಶದಲ್ಲಿ ಶಾಂತಿಯುತವಾಗಿ ಮತ ಚಲಾವಣೆ ನಡೆಯಿತು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ಬೆಳ್ಳಾಯರು-ಕೆರೆಕಾಡು ಬೂತ್ ಸಂಖ್ಯೆ-೧೧೯ರಲ್ಲಿ ಸಾಂಪ್ರದಾಯಿಕ ಮತಗಟ್ಟೆ ಎಂಬ ಪ್ರಚಾರದಿಂದ ಕೆಲವರು ಮತಗಟ್ಟೆಯನ್ನು ವೀಕ್ಷಿಸಲು ಅಗಮಿಸಿದ್ದರೂ ಸಹ ಅವರಿಗೆ ಒಳಗೆ ಪ್ರವೇಶವಿಲ್ಲದಿದ್ದರಿಂದ ಹೊರಗೆ ಸ್ವಾಗತ ಕಮಾನುಗಳನ್ನೇ ವೀಕ್ಷಿಸಿ ತೆರಳಿದರು.

ಅಪೋಲಿನ್ ಲೂಸಿ ಡಿಸೋಜ ಏಳತ್ತೂರು (102 ವರ್ಷ) ಮತದಾನ
ಮಂಗಳೂರು ತಾಲೂಕು ಮುಲ್ಕಿ ಹೋಬಳಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಮಂತೂರು ಶ್ರೀ ಶಾರದ ಮೋಡೆಲ್ ಸೆಕಂಡರಿ ಸ್ಕೂಲ್ ಮತಗಟ್ಟೆಯಲ್ಲಿ 102 ವರ್ಷ ಪ್ರಾಯದ ಅಪೋಲಿನ್ ಲೂಸಿ ಡಿಸೋಜ ಏಳತ್ತೂರು ಮತದಾನ ಮಾಡಿದರು.

Kinnigoli-12051806

ಶಂಕರ ಶೆಟ್ಟಿ (95 ವ) ಮತದಾನ
ಮಂಗಳೂರು ತಾಲೂಕು ಮುಲ್ಕಿ ಹೋಬಳಿಯ ಪದ್ಮನೂರು ದ.ಕ. ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 101 ರಲ್ಲಿ 95 ವರ್ಷ ಪ್ರಾಯದ ಶಂಕರ ಶೆಟ್ಟಿ ಪುನರೂರು ಹುರುಪಿನಿಂದ ಮತದಾನ ಮಾಡಿದರು.

Kinnigoli-12051807

 

ಕಿನ್ನಿಗೋಳಿ ಮತದಾನ
ಕಿನ್ನಿಗೋಳಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರದಿ ಸಾಲಿನಲ್ಲಿ ನಿಂತ ಮತದಾರರು.

Kinnigoli-12051808

Comments

comments

Comments are closed.

Read previous post:
Kinnigoli-12051803
ಸಿಡಿಲು ಬಡಿದು ಮನೆಗೆ ಹಾನಿ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೊಟ್ಟು ನಿವಾಸಿ ದರ್ಖಾಸು ಮನೆ ನಿವಾಸಿ ಸುರೇಶ್ ಡಿ. ಬಿ ಅವರ ಮನೆಗೆ ನಿನ್ನೆ ತಡ ರಾತ್ರಿ ಸಿಡಿಲು ಬಡಿದು ಮನೆಯ...

Close