ಪಾವಂಜೆ ಸಂಸ್ಕಾರ ಮತ್ತು ಸಂಸ್ಕೃತಿ ಶಿಬಿರ

ಕಿನ್ನಿಗೋಳಿ: ಎಳೆವೆಯಲ್ಲಿ ಮಕ್ಕಳಿಗೆ ಶಿಸ್ತು, ಸಂಸ್ಕಾರ ಸಂಸ್ಕೃತಿಯನ್ನು ತಿಳಿ ಹೇಳಬೇಕು. ಪರಾವಲಂಬಿ ಜೀವನದ ಪಾಠ ಹೇಳದೆ ಸ್ವಾವಲಂಬನೆ ಮೂಡಿಸಬೇಕು ಹಾಗಾದಲ್ಲಿ ಮಾತ್ರ ಅಭಿವೃದ್ಧಿ ಪರ ದೇಶವಾಗಲು ಸಾಧ್ಯ ಎಂದು ಹಿಂದೂ ಸಂಘ ಪರಿವಾರದ ಶ್ಯಾಮ್ ಸುಂದರ್ ಶೆಟ್ಟಿ ಹೇಳಿದರು.
ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ಭಾನುವಾರ ನಡೆದ ಸಂಸ್ಕಾರ ಮತ್ತು ಸಂಸ್ಕೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಿಬಿರದ ಮಾರ್ಗದರ್ಶಿ ರವೀಂದ್ರನಾಥ ರೈ, ಶಿಬಿರದ ನಿರ್ದೇಶಕ ಜಗದೀಶ್ ಎಂ., ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮಮತಾ ಪ್ರಭು, ಕಾತ್ಯಾಯಿನಿ, ಪರ್ಣಾಳಿ, ಪುಂಡಲೀಕ, ಪೋಷಕರಾದ ನಾರಾಯಣ, ರಾಮಚಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-14051802

Comments

comments

Comments are closed.

Read previous post:
Kinnigoli-14051801
ಕೆಂಚನಕೆರೆ ಕಲಾವಿದರಿಗೆ ಸನ್ಮಾನ

ಕಿನ್ನಿಗೋಳಿ: ಕೆಂಚನಕೆರೆಯಲ್ಲಿ ಭಾನುವಾರ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀನಡೆದ ಯಕ್ಷಗಾನ ಬಯಲಾಟದ ಸಂದರ್ಭ ಮೇಳದ ಕಲಾವಿದರಾದ ಗಣೇಶ್ ಚಂದ್ರಮಂಡಲ, ಹಾಗೂ ಅಕ್ಷಯ ಮಾರ್ನಾಡ್ ಅವರನ್ನು ಸನ್ಮಾನಿಸಲಾಯಿತು. ಈ...

Close