ಶ್ರಿ ಭಗವತೀ ತೀಯಾ ಸಂಘ ದಶಮಾನೋತ್ಸವ

ಕಿನ್ನಿಗೋಳಿ: ಯುವ ಸಮುದಾಯವನ್ನು ಸೂಕ್ತ ಮಾರ್ಗದರ್ಶನದ ಮೂಲಕ ಸಮಾಜವನ್ನು ಕಟ್ಟುವಲ್ಲಿ ಪ್ರೇರಣೆ ಆಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಲು ಸಹಕರಿಸಬೇಕು ಎಂದು ಸಸಿಹಿತ್ಲು ಶ್ರಿ ಭಗವತೀ ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಾಮನ ಇಡ್ಯಾ ಹೇಳಿದರು.
ಹಳೆಯಂಗಡಿ ಬಳಿಯ ಕದಿಕೆ ಭಂಡಾರ ಮಂದಿರದಲ್ಲಿ ಭಾನುವಾರ ನಡೆದ ಸಸಿಹಿತ್ಲು ಶ್ರಿ ಭಗವತೀ ತೀಯಾ ಸಂಘದ ದಶಮಾನೋತ್ಸವದ ಸಮಾರಂಭದಲ್ಲಿ ಮಾತನಾಡಿದರು.
ಮುಂಬಯಿ ತೀಯಾ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಬೆಲ್ಚಡ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭ ಹಿರಿಯ ಸಮಾಜ ಸೇವಕ ರಮೇಶ್ ಕೋಟ್ಯಾನ್ ಹಳೆಯಂಗಡಿ ಅವರನ್ನು ಸನ್ಮಾನಿಸಲಾಯಿತು.
ಸಸಿಹಿತ್ಲು ಭಗವತೀ ದೇವಳದ ಧರ್ಮದರ್ಶಿ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಹಿರಿಯರಾದ ರಾಘವ ಮಂಗಳೂರು ಅವರಿಗೆ ಗೌರವಾರ್ಪಣೆ ಸಲ್ಲಿಸಿದರು.
ಸಮಾಜದ ೪೭ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿಯನ್ನು, ಸಂಜೀವ ಪೂಜಾರಿ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಹಸ್ತ ನೀಡಲಾಯಿತು.
ಶ್ರಿ ಭಗವತೀ ಕ್ಷೇತ್ರದ ಗುರಿಕಾರರು, ಉಡುಪಿಯ ಸಾಹಿತಿ ಅಂಶುಮಾಲಿ, ಸಾಂಪ್ರದಾಯಿಕ ರೇಖಿ ಮಾಸ್ಟರ್ ವಿಜಯ ಸುವರ್ಣ ಪೊಳಲಿ, ಸಂಘದ ಗೌರವಾಧ್ಯಕ್ಷರಾದ ಗೀತಾ ಪಿ. ಕುಮಾರ್, ಸಂಘದ ಅಧ್ಯಕ್ಷ ಸುರೇಶ್ ಕೆ. ಬಂಗೇರ, ಕಾರ್ಯದರ್ಶಿ ರಮೇಶ್ ಬಂಗೇರ, ಕೋಶಾಧಿಕಾರಿ ಶರತ್‌ಕುಮಾರ್, ಲೇಖನಾ, ರೋಹಿತ್‌ಕುಮಾರ್ ಚೆಳ್ಯಾರು ಮತ್ತಿತರರು ಉಪಸ್ಥಿತರಿದ್ದರು.

Kinnigoli-15051801

 

Comments

comments

Comments are closed.

Read previous post:
Kinnigoli-14051803
ತಾಂತ್ರಿಕ ವಿದ್ಯಾರ್ಥಿಗಳ ಬೀಳ್ಕೊಡುಗೆ

ಕಿನ್ನಿಗೋಳಿ: ವಿದ್ಯಾರ್ಥಿಗಳ ಪ್ರತಿಭೆಯನ್ನು ತಾಂತ್ರಿಕ ಶಿಕ್ಷಣ ನೀಡುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಿರುವುದು ಒಳ್ಳೆಯ ಬೆಳವಣಿಗೆ. ಎಂದು ಜೇಸಿಐ ಮುಂಡ್ಕೂರು ಭಾರ್ಗವದ ಅಧ್ಯಕ್ಷೆ ಅರುಣಾ...

Close