ರೈಲ್ವೇ ಲೆವೆಲ್ ಕ್ರಾಸಿಂಗ್ ಜಾಗೃತಿ ಅಭಿಯಾನ

ಕಿನ್ನಿಗೋಳಿ: ರೈಲ್ವೇ ಇಲಾಖೆ ಉತ್ತಮ ಸೇವೆ ನೀಡಲು ಜನರ ಸಹಾಯ ಸಲಹೆ ಸೂಚನೆಗಳು ಅತ್ಯಗತ್ಯ ಸುರಕ್ಷತೆಯ ಬಗ್ಗೆ ಜನರ ಗಮನನೀಡಬೇಕು. ಲೆವೆಲ್ ಕ್ರಾಸಿಂಗ್ ಗೇಟನ್ನು ಎಂದಿಗೂ ಜಾಗರೂಕತೆಯಿಂದ ಪ್ರವೇಶಿಸಬೇಕು, ಮುಚ್ಚಿದ ಎಲ್.ಸಿ.ಗೇಟನಿಂದ ಸಾಕಷ್ಟು ದೂರವಿರಬೇಕು ಅವಘಡಗಳಿಗೆ ಆಸ್ಪದ ನೀಡಬಾರದು ಎಂದು ಕೊಂಕಣ ರೈಲ್ವೇಯ ಮಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾ ಕೃಷ್ಣ ಹೇಳಿದರು.
ಬುಧವಾರ ಹಳೆಯಂಗಡಿ ಇಂದಿರಾನಗರದ ರೈಲ್ವೇ ಕ್ರಾಸಿಂಗ್‌ನಲ್ಲಿ ಕೊಂಕಣ ರೈಲ್ವೇ ಕಾರ್ಪೋರೇಶನ್‌ನಿಂದ ರೈಲ್ವೇ ಕ್ರಾಸಿಂಗ್‌ನ ಜಾಗೃತಿ ಅಭಿಯಾನದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಗೇಟಿನ ತಡೆ ಬೇಲಿಯ ಕೆಳಗಿನಿಂದ ಅಥವಾ ಪಕ್ಕದಿಂದ ವಾಹನಗಳನ್ನು ಅತಿಕ್ರಮಣ ಮಾಡಲು ಪ್ರಯತ್ನ ನಡೆಸಬೇಡಿ, ಅವಸರ ಮಾಡಬಾರದು ನಿರ್ಲಕ್ಷ ವಹಿಸಿದಲ್ಲಿ ಜೀವಕ್ಕೆ ಅಪಾಯ. ಈರೀತಿಯ ಜಾಗೃತಿ ಅಭಿಯಾನವನ್ನು ಮೇ 15 ರಿಂದ ಜೂನ್ 16 ರ ವರೆಗೆ ಒಂದು ತಿಂಗಳ ಹಮ್ಮಿಕೊಂಡಿದ್ದು ಕೊಂಕಣ ರೈಲ್ವೇಯ 90 ರೈಲ್ವೇ ಗೇಟಿನಲ್ಲಿ ಈ ಜಾಗೃತಿ ಅಭಿಯಾನ ನಡೆಯಲಿದೆ ಎಂದರು.
ಈ ಸಂದರ್ಭ ಮಂಗಳೂರು ಪ್ರಾದೇಶಿಕ ಸಂಚಾರದ ಪ್ರಬಂಧಕ ಎಸ್.ವಿನಯಕುಮಾರ್ ನೇತೃತ್ವದಲ್ಲಿ ಕಮರ್ಷಿಯಲ್ ಸೂಪರ್‌ವೈಸರ್ ನಾಗಪತಿ ಹಗ್ಡೆ ಹಾಗೂ ಮದುಕುಮಾರ್ ಶೆಟ್ಟಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ರೈಲ್ವೇ ಕ್ರಾಸಿಂಗ್‌ನಲ್ಲಿ ಯಾವ ರೀತಿಯಲ್ಲಿ ಜನರು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ರೂಪಕದ ಮೂಲಕ ಪ್ರದರ್ಶಿಸಿದರು.
ಸುರತ್ಕಲ್‌ನ ಎಂಆರ್‌ಪಿಎಲ್ ಡೆಲ್ಲಿ ಪಬ್ಲಿಕ್ ಸ್ಕೂಲ್, ಕೇಂದ್ರೀಯ ವಿದ್ಯಾಲಯ ಎಕ್ಕೂರು ಹಾಗೂ ಪುತ್ತೂರು ಫಿಲೋಮಿನಾ ಶಾಲೆಯ ಸ್ಕೌಟ್ ಮತ್ತು ಬುಲ್‌ಬುಲ್ ಘಟಕದ ಮಕ್ಕಳು ಪಿ.ಜಿ. ವೆಂಕಟ್ರಾವ್ ಮಾರ್ಗದರ್ಶನದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕರ ಪತ್ರದ ಮೂಲಕ ಮಾಹಿತಿ ನೀಡಿದರು.

Kinnigoli-17051801 Kinnigoli-17051802

Comments

comments

Comments are closed.

Read previous post:
Kinnigoli-15051803
ಉಮಾನಾಥ ಕೋಟ್ಯಾನ್ ಸಂಭ್ರಮಾಚರಣೆ

ಕಿನ್ನಿಗೋಳಿ: ಮುಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ಚುನಾಯಿತರಾದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಂಗಳವಾರ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ಬಳಿ ಸಂಭ್ರಮ ಆಚರಿಸಿದರು.

Close