ಡಾ.ಜೋನ್ ಕ್ಲಾರೆನ್ಸ್ ಮಿರಾಂದ : ಗುರುವಂದನೆ

ಅಮ್ಚಿ ಗ್ರೂಪ್ ವಾಟ್ಸಪ್ ಬಳಗ
ಕಿನ್ನಿಗೋಳಿ : ಬದುಕಿನಲ್ಲಿ ಮಾನವೀಯತೆ ಪ್ರೀತಿ ಮಾತ್ರ ಉಳಿಯುತ್ತದೆ, ಉಳಿದುದೆಲ್ಲವೂ ಕ್ಷಣಿಕ, ಮಕ್ಕಳೊಂದಿಗೆ ಹೆಚ್ಚು ಸಮಯ ನೀಡಿ, ಅವರೊಂದಿಗೆ ಹೆಚ್ಚುಕಾಲ ಕಳೆಯಿರಿ ಎಂದು ಇತ್ತೀಚೆಗೆ ನಿವೃತ್ತರಾದ ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ.ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು.
ಪೊಂಪೈ ಕಾಲೇಜಿನ 1992-93 ರ ಶೈಕ್ಷಣಿಕ ವರ್ಷ ದ ಹಳೆ ವಿದ್ಯಾರ್ಥಿಗಳ ಅಮ್ಚಿ ಗ್ರೂಪ್ ವಾಟ್ಸಪ್ ಬಳಗದ ಸದಸ್ಯರು ಇತ್ತಿಚೆಗೆ ಅವರ ತಾಳಿಪಾಡಿ ನಿವಾಸಕ್ಕೆ ತೆರಳಿ ನಡೆಸಿದ ರಜತ ಮಿಲನ ಗುರುವಂದನೆ ಕಾರ್ಯಕ್ರಮದಲ್ಲಿ ೨೫ ವರ್ಷಗಳ ಬಳಿಕ ಒಂದಾಗಿ ಬಂದು ಗೌರವಿಸಿದ ತನ್ನ ಹಳೆ ಶಿಷ್ಯರ ಬಳಗವನ್ನು ಉದ್ದೇಶಿಸಿ ಮಾತನಾಡಿದರು.
ಪುಸ್ತಕ ಪ್ರಕಟಣೆ,ಕ್ಯಾನ್ಸರ್ ಪೀಡಿತರಿಗೆ ಆರ್ಥಿಕ ನೆರವು ಸಾಮಾಜಿಕ ಕಾರ್ಯವನ್ನೂ ಮಾಡುತ್ತಿರುವ ಬಳಗ ಈಗ ತಮ್ಮ ಇಡೀ ಗುರುವೃಂದಕ್ಕೆ ಸಂದಾಯವಾಗುವಂತೆ ಸಾಂಕೇತಿಕವಾಗಿ ಗುರುವಂದನೆ ಸಲ್ಲಿಸಿತು.
ಹೀರಾ ಶೆಟ್ಟಿ, ಬ್ಲೇಸಿಯಸ್ ಡಿಸೋಜ, ಲೊಲಿಟಾ, ಸಂತೋಷ್ ಆಚಾರ್ಯ,ಪುಷ್ಪನಾಥ್ ಸುವರ್ಣ, ಏಳಿಂಜೆ ನಾಗೇಶ್, ವಾಯ್ಲೆಟ್ ಡೇಸಾ,ಗಿರೀಶ್ ಕೊಂಚಾಡಿ, ವೇಣುಗೋಪಾಲ್ ಶೆಟ್ಟಿ, ವಿದ್ಯಾಲತಾ ಶೆಟ್ಟಿ, ಸುನೀತಾ ದೇವಾಡಿಗ,ಶಕುಂತಲಾ ಆಚಾರ್ಯ, ವಾಸುದೇವಭಟ್, ಶಾಲಿನಿ, ವಿಜಯಾ ಉಪಸ್ಥಿತರಿದ್ದರು.
ಪತ್ರಕರ್ತ ಏಳಿಂಜೆ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-18051804

Comments

comments

Comments are closed.