“ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್“

ಕಿನ್ನಿಗೋಳಿ: ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ವಿವಿಧ ಎಮಿರೇಟ್ಸ್‌ಗಳು ಸರ್ಕಾರಿ ಮಟ್ಟದಲ್ಲಿ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರತಿವರ್ಷ ನೀಡಲಾಗುತ್ತಿರುವ “ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್” 2017-18 ನೇ ಸಾಲಿನ ಪ್ರಶಸ್ತಿಯನ್ನು ಈ ಬಾರಿ ಕು. ಸ್ಪರ್ಶಾ ಶೆಟ್ಟಿಗೆ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಶಾರ್ಜಾ ಎಜುಕೇಶನ್ ಕೌನ್ಸಿಲ್ ಆಶ್ರಯದಲ್ಲಿ 2018 ಮೇ 3ನೇ ತಾರೀಕು ಗುರುವಾರ ಬೆಳಿಗ್ಗೆ 10 ಗಂಟೆಗೆ ಶಾರ್ಜಾ ಯೂನಿವರ್ಸಿಟಿ ಸಿಟಿ ಹಾಲ್‌ನಲಿಆಯೋಜಿಸಲಾಗಿತ್ತು.
ಇಂಡಿಯನ್ ಹೈಸ್ಕೂಲ್ ದುಬಾಯಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಪರ್ಶಾ ಶೆಟ್ಟಿ 7ನೇ ತರಗತಿಯ ವಿದ್ಯಾರ್ಥಿನಿ. ಶ್ರೀ ಪ್ರಕಾಶ ಶೆಟ್ಟಿ ಮತ್ತು ಶ್ರೀಮತಿ ಸುಶ್ಮಾ ಶೆಟ್ಟಿ ದಂಪತಿಗಳ ಮಗಳಾಗಿದ್ದಾಳೆ. ಕಳೆದ ಹನ್ನೆರಡು ವರ್ಷಗಳಿಂದ ದುಬಾಯಿಯಲ್ಲಿ ನೆಲೆಸಿದ್ದಾರೆ. ಕರಾವಳಿ ಕರ್ನಾಟಕದ ಕಿನ್ನಿಗೋಳಿ ದಿ| ಶ್ರೀ ಮಹಾಬಲಶೆಟ್ಟಿ ಮತ್ತು ಶ್ರೀಮತಿ ದಿ| ಸರಸ್ವತಿ ಶೆಟ್ಟಿ ಕಿಲೆಂಜೂರು ಮಾಡರ ಮನೆ ಹಾಗೂ ಉಡುಪಿ ಬೆಳ್ಕಲೆ ಅಜ್ಜರ ಮನೆ ಶ್ರೀ ನಿತ್ಯಾನಂದ ಶೆಟ್ಟಿ ಮತ್ತು ಶ್ರೀಮತಿ ಶ್ಯಾಮಲ ಶೆಟ್ಟಿಯವರ ಮೊಮ್ಮಗಳು. ಸ್ಪರ್ಶಾಳಿಗೆ ಬಾಲ್ಯದಿಂದಲೇ ವಿಶೇಷ ಪ್ರೊತ್ಸಾಹ, ಬೆಂಬಲ ಮಾರ್ಗದರ್ಶನದಿಂದ ಬಹುಮುಖ ಪ್ರತಿಭೆಯನ್ನು ಪಡೆದಿದ್ದಾಳೆ. ತನ್ನ ತಮ್ಮ ಪ್ರಶಮ್ ಶೆಟ್ಟಿ ಸಹ ತನ್ನ ಅಕ್ಕನಂತೆ ಉತ್ಸಾಹಿ ಬಾಲಕನಾಗಿದ್ದಾನೆ.
ಬಹುಮುಖ ಪ್ರತಿಭಯಾಗಿರುವ ಈಕೆ ಶಾಲೆಯಲ್ಲಿ ಶೈಕ್ಷಣಿಕ ಮತ್ತು ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಪಡೆದಿರುವ ಸ್ಪರ್ಶಾ ಐ.ಬಿ.ಟಿ. ಮತ್ತು ಅಸ್ಸೆಟ್ ಪರಿಕ್ಷೆಯಲ್ಲಿ ಪ್ರಶಸ್ತಿ ಪಡೆದ್ದಾಳೆ. ಬ್ಯಾಡ್ಮಿಂಟನ್ ಎಳೆಯ ಕ್ರೀಡಾಪಟುವಾಗಿ ಯು.ಎ.ಇ. ಮಟ್ಟದ ಸ್ಪರ್ಧೆಯಲ್ಲಿ ಹಲವು ಬಾರಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ, ಭರತನಾಟ್ಯನಲ್ಲಿಯೂ ಸಾಧನೆಗೈದಿರುವ ಈಕೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದು, ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ತನ್ನದಾಗಿಸಿ ಕೊಂಡಿದ್ದಾಳೆ. ಚಿತ್ರಕಲೆಯಲ್ಲಿಯೂ ಅಪಾರ ಆಸಕ್ತಿ ಇರುವ ಸ್ಪರ್ಶಾ ಹಲವಾರು ಮೆಡಲ್, “ರೀಡಿಂಗ್ ಕಾಂಟೆಸ್ಟ್”ನಲ್ಲಿ ಶಾಲೆಯ ಪ್ರತಿನಿಧಿಯಾಗಿ ಸ್ಪರ್ಧೆಯಲ್ಲಿ ಬಹುಮಾನ, ಯು.ಎ.ಇ ಮಟ್ಟದಲ್ಲಿ ವಿವಿಧ ಹಂತದಲ್ಲಿ ನಡೆದ ‘ಪಬ್ಲಿಕ್ ಸ್ಪೀಕಿಂಗ್’ ನಲ್ಲಿ ಬಹುಮಾನ ತನ್ನದಾಗಿಸಿಕೊಂಡಿದ್ದು ಮಾತ್ರವಲ್ಲದೆ ತನ್ನ ತರಗತಿಯಲ್ಲಿ ಹೆಡ್ ಮಾನಿಟರ್ ಆಗಿ ಎಳೆಯ ವಯಸ್ಸಿನಲ್ಲೆ ನಾಯಕಿಯ ಗುಣವನ್ನು ಮೈಗೂಡಿಸಿಕೊಂಡಿದ್ದಾಳೆ. ಯು.ಎ.ಇ.ಯಲ್ಲಿರುವ ಹಲವಾರು ಸೇವಾ ಸಂಸ್ಥೆಗಳ ಸೇವಾ ಚಟುವಟಿಕೆಗಳಲ್ಲಿ ಸ್ಪರ್ಶಾ ತನ್ನನ್ನು ತೊಡಗಿಸಿಕೊಂಡಿದ್ದು. ತನ್ನ ಸ್ವಂತ ಕಾಳಜಿಯಿಂದ ಪರಿಸರ ಉಳಿಸುವಿಕೆಯ ಅಭಿಯಾನದಲ್ಲಿ ಪಾಲ್ಗೊಂಡು, ವಿವಿಧ ವೇದಿಕೆಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾಳೆ.

2015 ರಲ್ಲಿ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ
ಗೌ. ಶೇಖ್ ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್‌ರವರಿಂದ ಸ್ಪರ್ಶಾ ಶೆಟ್ಟಿ 2015 ರಲ್ಲಿ “ಶೇಖ್ ಹಮ್ದಾನ್ ಪ್ರಶಸ್ತಿ” ಪಡೆದಿದ್ದು. ಮತ್ತೊಮ್ಮೆ ದ್ವಿತೀಯ ಬಾರಿಗೆ 2017-18 ರ ಸಾಲಿನ “ಗೌ. ಶೇಖ್ ಸುಲ್ತಾನ್ ಬಿನ್ ಮಹಮ್ಮದ್ ಅಲ್ ಕಾಸ್ಮಿಯ” ಪ್ರಾಯೋಜಕತ್ವದಲ್ಲಿ “ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್” ಪ್ರಶಸ್ತಿಯನ್ನು ಶಾರ್ಜಾ ಎಜುಕೇಶನ್ ಕೌನ್ಸಿಲ್ ರವರಿಂದ ಸ್ಪರ್ಶಾ ಶೆಟ್ಟಿಯನ್ನು ಗುರುತಿಸಿ ನೀಡಲಾಗಿದೆ.
ಪ್ರಶಸ್ತಿ ಪುರಸ್ಕೃತೆ ಕು. ಸ್ಪರ್ಶಾ ಶೆಟ್ಟಿಯನ್ನು ಈ ಬಾರಿ ದುಬಾಯಿಯ ಮ್ಯಾರಿಯಟ್ ಹೋಟೆಲ್ ಸಭಾಂಗಣದಲ್ಲಿ ಮೇ 11 ರಂದು ನಡೆಯಲಿರುವ ಬಂಟರ ೪೪ನೇ ವಾರ್ಷಿಕ ಸಮ್ಮಿಲನದಲ್ಲಿ ಮಹಾ ಪೋಷಕರಾದ ಡಾ.ಬಿ.ಆರ್. ಶೆಟ್ಟಿಯವರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

Kinnigoli-18051801 Kinnigoli-18051802 Kinnigoli-18051803

Comments

comments

Comments are closed.

Read previous post:
Kinnigoli-17051802
ರೈಲ್ವೇ ಲೆವೆಲ್ ಕ್ರಾಸಿಂಗ್ ಜಾಗೃತಿ ಅಭಿಯಾನ

ಕಿನ್ನಿಗೋಳಿ: ರೈಲ್ವೇ ಇಲಾಖೆ ಉತ್ತಮ ಸೇವೆ ನೀಡಲು ಜನರ ಸಹಾಯ ಸಲಹೆ ಸೂಚನೆಗಳು ಅತ್ಯಗತ್ಯ ಸುರಕ್ಷತೆಯ ಬಗ್ಗೆ ಜನರ ಗಮನನೀಡಬೇಕು. ಲೆವೆಲ್ ಕ್ರಾಸಿಂಗ್ ಗೇಟನ್ನು ಎಂದಿಗೂ ಜಾಗರೂಕತೆಯಿಂದ ಪ್ರವೇಶಿಸಬೇಕು,...

Close