ಸೋಲನ್ನು ಮತ್ತೊಬ್ಬರ ಹೆಗಲಿಗೆ ಹಾಕಬಾರದು

ಕಿನ್ನಿಗೋಳಿ: ನಮಗೆ ಕಾಂಗ್ರೆಸ್ ಪಕ್ಷವು ಹಲವು ಅವಕಾಶವನ್ನು ನೀಡಿ ಪ್ರೋತ್ಸಾಹಿಸಿದೆ. ಸೋಲನ್ನು ಪ್ರಾಮಾಣಿಕವಾಗಿ ಒಪ್ಪಿ ಅದನ್ನು ಇತರರ ಮೇಲೆ ಹಾಕಲು ಪ್ರಯತ್ನಿಸಬಾರದು ಇದರಿಂದ ಪಕ್ಷಕ್ಕೆ ಇನ್ನಷ್ಟು ಹಾನಿಯಾಗುತ್ತದೆ ಎಂದು ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿಯಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಹಿಂದುತ್ವದಿಂದಾಗಿ ಕಾಂಗ್ರೆಸ್‌ಗೆ ಕರಾವಳಿ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ಬಿಜೆಪಿ ಮೂಲ್ಕಿ ಮೂಡಬಿದಿರೆಯಲ್ಲಿ ಸುಳ್ಳಿನ ಸರಮಾಲೆಯ ಮೂಲಕ ಕ್ಷೇತ್ರದಲ್ಲಿ ಗೆದ್ದಿರುವುದು ಕೇವಲ ಹಿಂದುತ್ವದ ಅಜೆಂಡಾದಲ್ಲಿ ಮಾತ್ರ. ಯಡಿಯೂರಪ್ಪ ಎರಡುದಿನ ಮುಖ್ಯಮಂತ್ರಿಯ ನಾಟಕವೇ ಸಾಕ್ಷಿಯಾಗಿದೆ. ಎಂದು ಹೇಳಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧನಂಜಯ ಮಟ್ಟು ಅಧ್ಯಕ್ಷತೆ ವಹಿಸಿ, ಕಾರ್ಯಕರ್ತರಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಮುಂದಿನ ಮೂಲ್ಕಿ ಪಟ್ಟಣ ಪಂಚಾಯಿತಿ, ಮೂಡಬಿದಿರೆ ಪುರಸಭೆ, ಲೋಕಸಭೆಗೆ ಪಕ್ಷವನ್ನು ಇನ್ನಷ್ಟು ಸಂಘಟಿಸಲು ತೀರ್ಮಾನಿಸಲಾಯಿತು.
ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್, ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್, ಪ್ರವೀಣ್‌ಕುಮಾರ್ ಬೊಳ್ಳೂರು, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಲ್ಕಿ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್‌ನ ಹಕೀಂ ಮೂಲ್ಕಿ, ಕ್ಷೇತ್ರ ಪ್ರಚಾರ ಸಮಿತಿಯ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಶಶೀಂದ್ರ ಎಂ. ಸಾಲ್ಯಾನ್, ಬಾಲಾದಿತ್ಯ ಆಳ್ವಾ, ಬಿ.ಎಂ.ಆಸೀಫ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-20051802

Comments

comments

Comments are closed.