ಪುನರೂರು ವಿಪ್ರ ಸಮಾಗಮ

ಕಿನ್ನಿಗೋಳಿ: ಬ್ರಾಹ್ಮಣ ಸಂಘಟನೆಗಳು ಸದೃಢವಾಗಬೇಕು ರಾಜಕೀಯದಲ್ಲೂ ಬ್ರಾಹ್ಮಣರು ಹೆಚ್ಚು ಗುರುತಿಸಿಕೊಳ್ಳಬೇಕು. ಎಂದು ಅಗರಿ ಸಂಸ್ಥೆಯ ರಾಘವೇಂದ್ರ ರಾವ್ ಹೇಳಿದರು.
ಪುನರೂರು ವಿಪ್ರ ಸಂಪದ ಆಶ್ರಯದಲ್ಲಿ ಪುನರೂರು ವಿಶ್ವನಾಥ ದೇವಳದಲ್ಲಿ ಭಾನುವಾರ ನಡೆದ ವಿಪ್ರಸಮಾಗಮದ ಸಮಾರೋಪ ಹಾಗೂ ಮಹಾಸಭೆಯಲ್ಲಿ ಮಾತನಾಡಿದರು.
ಕೊಲಕಾಡಿ ವಾದಿರಾಜ ಉಪಾಧ್ಯಾಯ ಉಪನ್ಯಾಸ ನೀಡಿ ಬ್ರಾಹ್ಮಣರೆಂದು ಹೇಳಿಕೊಳ್ಳಲು ಹೆಮ್ಮೆ ಇರಲಿ. ಹಿಂಜರಿಕೆ ಬೇಡ ಎಂದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಕೃಷ್ಣ ಕದ್ರಿ, ಯುಗಪುರುಷ ಸಂಪಾದಕ ಕೆ.ಭುವನಾಭಿರಾಮ ಉಡುಪ, ವಿಪ್ರ ಸಂಪದದ ಜನಕರಾಜ ರಾವ್, ಸುರೇಶ್ ರಾವ್, ಪಟೇಲ್ ವೆಂಕಟೇಶ ರಾವ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಮಹಿಳಾ ವೇದಿಕೆಯ ವಿನುತಾ ರಾವ್, ನೂತನ ಕೋಶಾಕಾರಿ ಅವಿನಾಶ್ ರಾವ್ ಮತ್ತಿತರರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುನರೂರು ವಿಪ್ರ ಸಂಪದದ ವಾಸುದೇವ ರಾವ್ ಸ್ವಾಗತಿಸಿದರು. ರಾಘವೇಂದ್ರ ರಾವ್ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಚಂದ್ರಶೇಖರ ರಾವ್ ಲೆಕ್ಕಪತ್ರ ಮಂಡಿಸಿದರು. ಸುಧಾಕರ ರಾವ್ ನೂತನ ಪದಾಕಾರಿಗಳನ್ನು ಪರಿಚಯಿಸಿದರು. ಶ್ರೀ ರಕ್ಷ ಕಾರ್ಯಕ್ರಮ ನಿರೂಪಿಸಿದರು.

Kinnigoli-20051801

Comments

comments

Comments are closed.

Read previous post:
Kinnigoli-18051806
ಬಪ್ಪನಾಡು ಸನ್ಮಾನ

ಮುಲ್ಕಿ : ಬಪ್ಪನಾಡು ಕೋರ‍್ದಬ್ಬು ದೈವಸ್ಥಾನದಲ್ಲಿ ಇತ್ತೀಚಿಗೆ ನಡೆದ ವಾರ್ಷಿಕ ನೇಮೋತ್ಸವದ ಸಂದರ್ಭ ಕಳೆದ 45 ವರ್ಷಗಳಿಂದ ದೈವದ ಸೇವೆ ಸಲ್ಲಿಸುತ್ತಿರುವ ಕೋಡಿಕಲ್ ಜಯ ಪಾತ್ರಿ ಅವರನ್ನು ದೈವಸ್ಥಾನದ...

Close