ಯುವವಾಹಿನಿ ಘಟಕದ ವಾರ್ಷಿಕ ಮಹಾಸಭೆ

ಕಿನ್ನಿಗೋಳಿ: ಯುವ ಸಮುದಾಯದ ಚಿಂತನೆ ಸಮಾಜದ ಬಗ್ಗೆ ಇರಬೇಕು. ಯುವ ಶಕ್ತಿಯನ್ನು ಸದ್ಭಳಕೆ ಮಾಡುವ ಚೈತನ್ಯ ಸಂಘ ಸಂಸ್ಥೆಗಳಿಂದ ಮಾತ್ರ ಸಾಧ್ಯವಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ಹೇಳಿದರು.
ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಯುವವಾಹಿನಿ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಮಾತನಾಡಿ ಪ್ರತಿಯೊಂದು ಸಮುದಾಯದ ಸೇವಾ ಸಂಸ್ಥೆಗಳು ಯುವಜನರನ್ನು ಸೇರಿಸಿಕೊಂಡು ಜನಪರ ಕಾಳಜಿ ವಹಿಸಿದಾಗ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳನ್ನು ಚುನಾವಣಾಧಿಕಾರಿ ರಮೇಶ್ ಬಂಗೇರ ಘೋಷಿಸಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ಕಟ್ಟಡ ಸಮಿತಿ ಅಧ್ಯಕ್ಷ ಮೋಹನ್ ಸುವರ್ಣ, ಯುವವಾಹಿನಿ ಘಟಕದ ನಿಕಟಪೂರ್ವ ಅಧ್ಯಕ್ಷ ದೀಪಕ್ ನಾನಿಲ್, ಅಧ್ಯಕ್ಷ ಶರತ್‌ಕುಮಾರ್, ಕಾರ್ಯದರ್ಶಿ ಚಂದ್ರಿಕಾ ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.

Kinnigoli-21051801Kinnigoli-21051801

Comments

comments

Comments are closed.

Read previous post:
Kinnigoli-18051806
ಬಪ್ಪನಾಡು ಸನ್ಮಾನ

ಮುಲ್ಕಿ : ಬಪ್ಪನಾಡು ಕೋರ‍್ದಬ್ಬು ದೈವಸ್ಥಾನದಲ್ಲಿ ಇತ್ತೀಚಿಗೆ ನಡೆದ ವಾರ್ಷಿಕ ನೇಮೋತ್ಸವದ ಸಂದರ್ಭ ಕಳೆದ 45 ವರ್ಷಗಳಿಂದ ದೈವದ ಸೇವೆ ಸಲ್ಲಿಸುತ್ತಿರುವ ಕೋಡಿಕಲ್ ಜಯ ಪಾತ್ರಿ ಅವರನ್ನು ದೈವಸ್ಥಾನದ...

Close