ದಿ.ಮಾಧವ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮ

ಮೂಲ್ಕಿ : ಯಕ್ಷಗಾನ ರಂಗದ ಮೇರು ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಹಾಗೂ ಕೀರ್ತಿಶೇಷ ಪ್ರತಿಭೆಗಳನ್ನು ಸಂಸ್ಮರಣೆಯ ಮೂಲಕ ನೆನಪಿಸುವ ಕಾರ್ಯ ಅಭಿನಂದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಪ್ರಾಂಗಣದಲ್ಲಿ ಸೋಮವಾರ ಯಕ್ಷ ಮಿತ್ರರು ಶಿಮಂತೂರು ಮತ್ತು ಪಂಜಿನಡ್ಕ ಇವರ ಆಸರೆಯಲ್ಲಿ ಯಕ್ಷ ಲೋಕದ ಮಾಣಿಕ್ಯ ದಿ.ಮೂಡಬಿದ್ರೆ ಮಾಧವ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆನಾದಿ ಕಾಲದಿಂದ ಯಕ್ಷ ಕಲಾವಿದರಾಗಿ ಗುರುಗಳಾಗಿ ಮುಂದಿನ ಪೀಳಿಗೆಗೆ ಕಲೆಯನ್ನು ರಕ್ಷಿಸಿ ಬೆಳೆಸಿ ನೀಡಿದ ಮಹಾನ್ ಕಲಾಕಾರರ ಬಗ್ಗೆ ಯುವ ಸಮಾಜ ತಿಳಿದುಕೊಳ್ಳಬೇಕು ಜೊತೆಗೆ ಸಾಧಕ ಕಲಾವಿದರ ಗುರುತಿಸುವಿಕೆ ಅಶಕ್ತ ಕಲಾವಿದರಿಗೆ ಸಹಾಯ ಮುಂತಾದ ಯೋಜನೆಗಳು ಬಹಳ ಉತ್ತಮ ಎಂದರು.
ದಿ.ಮೂಡಬಿದ್ರೆ ಮಾಧವ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮದಡಿ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ಯಕ್ಷ ಕಲಾವಿದ ಡಾ. ಕೊಳ್ಯೂರು ರಾಮಚಂದ್ರ ರಾಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಳ್ಯೂರು, ಯಕ್ಷಗಾನ ರಂಗದಲ್ಲಿ ಪರಿಪೂರ್ಣತೆ ಇರುವುದು ವಿರಳ. ಹೆಚ್ಚಿನವರು ಯಕ್ಷಗಾನದ ಅಂಗವೊಂದರ ಸಾಧಕರಾಗಿ ಹೊರಹೊಮ್ಮುವುದು ಕಾಣ ಸಿಗುತ್ತದೆ ಆದರೆ ಮಾಧವ ಶೆಟ್ಟಿಯವರು ಎಲ್ಲಾ ವರ್ಗದಲ್ಲಿ ಪರಿಪೂರ್ಣರೆನಿಸಿಕೊಂಡ ಸಾಧಕ ಕಲಾವಿದ ಅವರ ಅಣಿನಯ ಶ್ರಮ ಯುವ ಸಾಧಕರಿಗೆ ಮಾದರಿ ಎಂದರು.
ಭಾಸ್ಕರ ಪಡುಬಿದ್ರಿ ಸಂಸ್ಮರಣಾ ಭಾಷಣ ಮಾಡಿದರು. ಅತಿಥಿಗಳಾಗಿ ಛಂದೊಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಮೊಕ್ತೇಸರ ರಾಮಚಂದ್ರ ಭಟ್, ಗುಲಾಬಿ ಮಾಧವ ಶೆಟ್ಟಿ, ಮನೋಹರ ಕುಂದರ್ ಎರ್ಮಾಳು, ಸಂಘಟಕರಾದ ಪದ್ಮಾವತಿ ಜಯರಾಮ್ ಎಂ.ಶೆಟ್ಟಿ ಪರೆಂಕಿಲ, ವೇಣುಗೋಪಾಲ ಶೆಟ್ಟಿ ಪರೆಂಕಿಲ ಮತ್ತಿತರರು ಉಪಸ್ಥಿತರಿದ್ದರು. ಶಕುಂತಲಾ ಶೆಟ್ಟಿ ಸ್ವಾಗತಿಸಿದರು,ಪ್ರಾಣೇಶ ಭಟ್ ದೇಂದಡ್ಕ ನಿರೂಪಿಸಿದರು.

Kinnigoli-22051802

Comments

comments

Comments are closed.

Read previous post:
Kinnigoli-22051801
ಪ್ರೇಮಲತಾ ಕಿರ್ಕುಡ್

ಹಳೆಯಂಗಡಿ : ಮೂಲ್ಕಿ ಕಾರ್ನಾಡು ಕಾರುಣ್ಯ ಮನೆಯ ದಿ. ವಿ.ಪಿ.ಕಿರ್ಕುಡ್ ಅವರ ಪತ್ನಿ ನಿವೃತ್ತ ಶಿಕ್ಷಕಿ ಪ್ರೇಮಲತಾ ಕಿರ್ಕುಡ್ (87) ಮೇ.21 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು....

Close