ಸಸಿಹಿತ್ಲು ಗರೋಡಿ ಧ್ವಜಸ್ತಂಭಕ್ಕೆ ಹಾನಿ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಧ್ವಜಸ್ತಂಭ ಭಾನುವಾರ ಮುಂಜಾನೆ ಬಿರುಗಾಳಿ ಮಳೆಗೆ ಹಾನಿಗೊಂಡಿದೆ.
ಸುಮಾರು ೩೫ ವರ್ಷಗಳ ಹಿಂದೆ ಗರೋಡಿಯಲ್ಲಿ ಸ್ಥಾಪಿಸಲ್ಪಟ್ಟ ಧ್ವಜಸ್ತಂಭಕ್ಕೆ ಕಳೆದ 15 ವರ್ಷದ ಹಿಂದೆ ತಾಮ್ರದ ಹೊದಿಕೆಯನ್ನು ಮುಚ್ಚಲಾಗಿತ್ತು. ಭಾರೀ ಮಳೆ ಗಾಳಿಗೆ ಧ್ವಜಸ್ತಂಭದ ಬುಡದಲ್ಲಿಯೇ ಬಿರುಕು ಬಿಟ್ಟು ನೇರವಾಗಿ ವಾಲಿದೆ. ಆದರೆ ಮೇಲ್ಮುಖದಲ್ಲಿ ತಗಡು ಶೀಟಿನ ಹೊದಿಕೆ ಇದ್ದುದರಿಂದ ಧ್ವಜಸ್ತಂಭವು ಹಾನಿಗೊಂಡು ತಗಡು ಶೀಟಿಗೆ ಆಧಾರವಾಗಿ ಸಿಲುಕಿಕೊಂಡಿದೆ. ಸುಮಾರು 3.5 ಲಕ್ಷ ರೂ.ನಷ್ಟ ಎಂದು ಅಂದಾಜಿಸಲಾಗಿದೆ. .
ಈ ಬಗ್ಗೆ ದೈವಸ್ಥಾನದ ಪ್ರಮುಖರು ಹೊಗೆಗುಡ್ಡೆ ಉಮಾಮಹೇಶ್ವರೀ ದೇವಳದ ಅರ್ಚಕರ ಮೂಲಕ ದೈವಸ್ಥಾನದಲ್ಲಿಯೇ ಪ್ರಶ್ನೆ ಇಟ್ಟಿದ್ದು ನೂತನ ಧ್ವಜಸ್ತಂಭ ಶೀಘ್ರದಲ್ಲಿಯೇ ನಿರ್ಮಾಣ ಮಾಡುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದ್ದಾರೆ. ಕಳೆದ ಬಾರಿ ನೇಮೋತ್ಸವದ ಸಂದರ್ಭದಲ್ಲೂ ಸಹ ಧ್ವಜಸ್ತಂಭವನ್ನು ಬದಲಾಯಿಸುವ ಬಗ್ಗೆ ಆಡಳಿತ ಮಂಡಳಿ ಪ್ರಶ್ನೆಯಲ್ಲಿ ಕೇಳಲಾಗಿತ್ತು ಇದಕ್ಕೆ ದೈವದ ಸಮ್ಮತಿಯೂ ಸಿಕ್ಕಿತ್ತು ಎಂದು ತಿಳಿದು ಬಂದಿದೆ.

Kinnigoli-20051803 Kinnigoli-20051804

Comments

comments

Comments are closed.

Read previous post:
Kinnigoli-22051802
ದಿ.ಮಾಧವ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮ

ಮೂಲ್ಕಿ : ಯಕ್ಷಗಾನ ರಂಗದ ಮೇರು ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಹಾಗೂ ಕೀರ್ತಿಶೇಷ ಪ್ರತಿಭೆಗಳನ್ನು ಸಂಸ್ಮರಣೆಯ ಮೂಲಕ ನೆನಪಿಸುವ ಕಾರ್ಯ ಅಭಿನಂದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ...

Close