ಉಳೆಪಾಡಿ – ಪ್ರತಿಷ್ಠಾ ವರ್ಧಂತಿ, ಸಾಮೂಹಿಕ ವಿವಾಹ

ಕಿನ್ನಿಗೋಳಿ: ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಸಾಧಿಸಲು ಸರಳವಾಗಿ ನಡೆಯುವ ಸಾಮೂಹಿಕ ವಿವಾಹದಿಂದ ಸಾಧ್ಯ. ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಮುನ್ನುಡಿ ಎಂದು ಮೂಲ್ಕಿ ಸೀಮೆಯ ಅರಸರಾದ ಕೆ. ದುಗ್ಗಣ್ಣ ಸಾವಂತರು ಹೇಳಿದರು.
ಬುಧವಾರ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ನಡೆದ ಎಂಟನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ-2018 ಸಮಾರಂಭದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಶುಭಾಶಂಸನೆಗೈದರು.
ರಾಘವೇಂದ್ರ ನಾಯ್ಕ್- ಸಂಗೀತಾ, ಶೇಖರ-ಸುಗಂಧಿ, ಶಂಕರ-ತಾರಾ, ಸಂಪತ್‌ಕುಮಾರ್-ಕೀರ್ತಿ, ಜಗದೀಶ-ಪ್ರಭಾವತಿ, ಗಿರೀಶ-ಚಂದ್ರಕಲಾ ಒಟ್ಟು ಆರು ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು.
ಈ ಸಂಧರ್ಭ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಚತುರ್ಥ ಸ್ಥಾನ ಹಾಗೂ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಮೆಲಿಷಾ ರೋಡ್ರಿಗಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪಾವಂಜೆ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ದೇವಳದ ಧಮದರ್ಶಿ ಯಾಜಿ ನಿರಂಜನ ಭಟ್, ಬೆಂಗಳೂರು ಬಸವನ ಗುಡಿ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಬಂಧಕ ಸಿ.ಎಸ್. ಸತೀಶ್, ಕರ್ನಾಟಕ ಮಥಾಯಿ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜಗೋಪಾಲ ರೈ, ಸುರತ್ಕಲ್ ಮಹಮ್ಮಾಯೀ ದೇವಳದ ಕೆ. ಅರುಣ್ ಪೈ, ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದ ಗೌರವಾಧ್ಯಕ್ಷರಾದ ವಿರಾರ್ ಶಂಕರಶೆಟ್ಟಿ ಬಳ್ಕುಂಜೆ, ಸಾಮೂಹಿಕ ವಿವಾಹದ ಸಂಚಾಲಕ ಬಳ್ಕುಂಜೆಗುತ್ತು ಡಾ. ಕೃಷ್ಣಕುಮಾರ್ ಶೆಟ್ಟಿ ಮುಂಬೈ, ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಾರ್ಯಧ್ಯಕ್ಷರಾದ ನಾರಾಯಣ ಶೆಟ್ಟಿ ಉಳೆಪಾಡಿ, ಸುಧಾಕರ್ ಮೆಸ್ಕಾಂ ಕಿನ್ನಿಗೋಳಿ , ಪದ್ಮಿನಿ ವಸಂತ್, ಮಮತಾ ಪೂಂಜಾ, ಶ್ರೀಮತಿ ಮೋಹನ್‌ದಾಸ್ ಮತ್ತಿತರರು ಉಪಸ್ಥಿತರಿದ್ದರು.
ದೇವಳದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀಮತಿ ಪ್ರಮೀಳಾ ವಿನಯ್ ಸುರಗಿರಿ ಸನ್ಮಾನಿತರನ್ನು ಪರಿಚಯಿಸಿದರು,ಎಂ.ಎಸ್. ಕೃಷ್ಣ ಮೋಹನ್ ಮಣ್ಣಗುಡ್ಡೆ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-24051801

Comments

comments

Comments are closed.

Read previous post:
Kinnigoli-20051805
ಅಧ್ಯಕ್ಷರಾಗಿ ಉದಯ ಕುಮಾರ್ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ 2018-20 ನೇ ಸಾಲಿನ ಅಧ್ಯಕ್ಷರಾಗಿ ಉದಯ ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಸ್ . ಯೋಗೀಶ್, ಕಾರ್ಯದರ್ಶಿ ಹರಿಪ್ರಸಾದ್, ಜೊತೆ ತೆಕಾರ್ಯದರ್ಶಿ...

Close