ರಮ್ಯಶ್ರೀ ಸಿ.ಎ. ಆಗಬೇಕೆನ್ನುವ ಬಯಕೆ

ಮೂಲ್ಕಿ: ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 5ನೇ ರ‍್ಯಾಂಕ್‌ಗಳಿಸಿ ಜಿಲ್ಲೆಗೆ ಹೆಮ್ಮೆ ತರಿಸಿದ ಸುರತ್ಕಲ್ ಗೋವಿಂದದಾಸ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ರಮ್ಯಶ್ರೀ ಯವರನ್ನು ಜೋಕಟ್ಟೆ ಪೇಜಾವರ ಮಠದಲ್ಲಿ ಜರುಗಿದ ಸಮಾರಂಭದಲ್ಲಿ ಪೇಜಾವರ ಮಠದ ಹಿರಿಯ ಯತಿವರ್ಯರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಶಾಲು ಹೊದಿಸಿ ಫಲಮಂತ್ರಾಕ್ಷತೆಯನ್ನಿತ್ತು ಹರಸಿದರು ರಮ್ಯಶ್ರೀಯವರು ಎಲ್ಲಾ 5ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ಇಂಗ್ಲೀಷ್‌ನಲ್ಲಿ 91ಅಂಕ ಪಡೆದಿರುತ್ತಾರೆ ಈ ಸಂದರ್ಭ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಪುರಾಣಿಕ್‌ರವರು ಉಪಸ್ಥಿತರಿದ್ದು,  ರಮ್ಯಶ್ರೀ ಯವರನ್ನು ಹರಸಿದರು ರಮ್ಯಶ್ರೀ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಮೂರನೇ ರ‍್ಯಾಂಕ್ ಪಡೆದಿದ್ದರು ಹೊಸಬೆಟ್ಟು ನಿವಾಸಿ ಪಿ.ರಮೇಶ್‌ರಾವ್ ಹಾಗೂ ಮೀರಾ ದಂಪತಿಯರ ಸುಪುತ್ರಿಯಾದ ರಮ್ಯಶ್ರೀ ಮುಂದೆ ಸಿ.ಎ. ಆಗಬೇಕೆನ್ನುವ ಬಯಕೆ ವ್ಯಕ್ತಪಡಿಸಿದರು. ಈ ಸಮಾರಂಭವನ್ನು ಸುಧಾಕರ್ ಪೇಜಾವರ ನಿರೂಪಿಸಿದರು.

Kinnigoli-25051805

Comments

comments

Comments are closed.

Read previous post:
Kinnigoli-25051804
ರಮ್ಯಶ್ರೀ ಅಭಿನಂದನ ಕಾರ್ಯಕ್ರಮ

ಮೂಲ್ಕಿ: ದ್ವ್ವಿತೀಯ ಪಿ.ಯು.ಸಿ ಪರೀಕ್ಷೇಯಲ್ಲಿ 5ನೇ ರ‍್ಯಾಂಕ್‌ಗಳಿಸಿದ ಜಿಲ್ಲೆಗೆ ಹೆಮ್ಮೆ ತರಿಸಿದ ಸುರತ್ಕಲ್ ಗೋವಿಂದದಾಸ್ ಪಿ.ಯು ಕಾಲೇಜಿನ ರಮ್ಯಶ್ರೀ ಯವರನ್ನುಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ...

Close