ದಿ. ಸದಾನಂದ ಆಸ್ರಣ್ಣ ಪ್ರಶಸ್ತಿ ಪ್ರದಾನ

ಕಿನ್ನಿಗೋಳಿ : ರಾಮಾಯಣ ಮಹಾಭಾರತ ಹಾಗೂ ವೇದ ಉಪನಿಷತ್ ಪುರಾಣದ ತಿರುಳನ್ನು ಸರಳವಾಗಿ ಯಕ್ಷಗಾನದ ಮೂಲಕ ಜನಸಾಮಾನ್ಯರಿಗೆ ತಲುಪಿಸಿ ಜನರನ್ನು ಧರ್ಮ ಮಾರ್ಗದಡೆಗೆ ಕೊಂಡೊಯ್ಯಲು ಪ್ರೇರೇಪಿಸುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಬುಧವಾರ ಕಟೀಲು ರಥಬೀದಿಯಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟದ ಸಂದರ್ಭ ತಂತ್ರಿಗಳಾದ ವೆ. ಮೂ. ವೇದವ್ಯಾಸ ತಂತ್ರಿ ಅವರಿಗೆ ದಿ. ಸದಾನಂದ ಆಸ್ರಣ್ಣ ಪ್ರಶಸ್ತಿ ನೀಡಿ ದಂಪತಿಗಳನ್ನು ಗೌರವಿಸಿ ಮಾತನಾಡಿದರು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ವೃತ್ತ ನೀರೀಕ್ಷಕ ಪರಶಿವ ಮೂರ್ತಿ, ದ. ಕ. ಜಿ. ಪಂ. ಲೋಕೋಪಯೋಗಿ ಇಲಾಖೆಯ ಅಭಿಯಂತರ ಸುಜನ್ ಚಂದ್ರ , ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಭೋದಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ ಬಜಪೆ, ರುಕ್ಮಿಣಿ ಸದಾನಂದ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ ಉಪಸ್ಥಿತರಿದ್ದರು.
ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅಭಿನಂದನಾ ಭಾಷಣಗೈದರು. ನಿವೃತ್ತ ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-24051807

Comments

comments

Comments are closed.

Read previous post:
Kinnigoli-24051806
ಉಲ್ಲಂಜೆ ಸಮ್ಮಾನ

ಕಿನ್ನಿಗೋಳಿ: ಉಲ್ಲಂಜೆ ಕೊರಗಜ್ಜ, ಮಂತ್ರದೇವತೆ ಚಾಮುಂಡೇಶ್ವರೀ ಗುಳಿಗ ಸನ್ನಿಧಿಯಲ್ಲಿ ಬುಧವಾರ ನಡೆದ ವಾರ್ಷಿಕ ನೇಮದ ಸಂದರ್ಭ ದೈವದ ಮಧ್ಯಸ್ಥಗಾರ ಉಮೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ...

Close