ಕಟೀಲು ಮೇಳ 1146 ಪ್ರದರ್ಶನ

ಕಟೀಲು : ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಇಂದು ಪತ್ತನಾಜೆಯ ಆಟದೊಂದಿಗೆ ಮೇಳ ಒಳಗಾಗಲಿದೆ, ಅತ್ಯಂತ ಹೆಚ್ಚು ಯಕ್ಷಗಾನ ಮೇಳಗಳನ್ನು ಹೊಂದಿರುವ ದೇವಳ ಎಂಬ ಪ್ರಖ್ಯಾತಿಯನ್ನು ದೇವಳ ಪಡೆದಿದೆ. ಇಂದು ರಥ ಬೀದಿಯಲ್ಲಿ ಆರೂ ಮೇಳಗಳ ಕಲಾವಿದರಿಂದ ಆಟ ನಡೆಯುತ್ತಿದ್ದು, ಯಕ್ಷಗಾನದ ಪೂರ್ವ ರಂಗ ರಥಬೀದಿಯಲ್ಲಿ ಹಾಕಿದ ಆರೂ ರಂಗಸ್ಥಳದಲ್ಲಿ ನಡೆದರೆ, ಪ್ರಸಂಗ ಪೀಠಿಗೆಯಿಂದ ನಂತರ ಒಂದೇ ರಂಗಸ್ಥಳದಲ್ಲಿ ನಡೆಯುತ್ತದೆ. ಈ ಬಾರಿ ನವಂಬರ್ 13 ಕ್ಕೆ ಹೋರಟ ಮೇಳ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಶಿವಮೊಗ್ಗದ ಸಾಗರ ಕೇರಳದ ಕಾಸರಗೋಡು ಗಳಲ್ಲಿ ಆರೂ ಮೇಳಗಳ ಒಟ್ಟು 1146 ಬಯಲಾಟಗಳಲ್ಲಿ 601 ದೇವೀಮಾಹಾಮತ್ಮ್ಯೆ ಪ್ರಸಂಗವೇ ಆಗಿರುವುದು ಈ ಬಾರಿಯ ವಿಶೇಷವಾಗಿದೆ. ಆರಂಭದ ಹಾಗೂ ಇಂದಿನ ಕೊನೆಯ ಪ್ರದರ್ಶನದ ಲೆಕ್ಕ ಹೊರತು ಪಡಿಸಿ ಪ್ರತಿ ಮೇಳಗಳು 191 ಪ್ರದರ್ಶನ ನೀಡಿವೆ.
ಒಂದನೇ ಮೇಳ 101, ಎರಡನೇ ಮೇಳ 98, ಮೂರನೇ ಮೇಳ 97, ನಾಲ್ಕನೇ ಮೇಳ 104, ಐದನೇ ಮೇಳ 101 ಹಾಗೂ ಆರನೇ ಮೇಳ 100 ದೇವೀಮಾಹಾತ್ಮ್ಯೆ ಪ್ರಸಂಗವನ್ನು ಪ್ರದರ್ಶಿಸಿವೆ. ಅಂದರೆ ಶೇಕಡಾ 52ಕ್ಕಿಂತ ಹೆಚ್ಚು ದೇವೀಮಾಹಾತ್ಮ್ಯೇ ಪ್ರಸಂಗವೇ ಪ್ರದರ್ಶನ ಕಂಡಿವೆ. ಆರೂ ಮೇಳಗಳೂ ದೇವೀಮಾಹಾಮತ್ಮ್ಯೆಯನ್ನೇ ಮೂರು ದಿನ, ಐದು ಮೇಳಗಳು 11 ದಿನ ಪ್ರದರ್ಶನ ನೀಡಿವೆ. ಕಟೀಲು ಕ್ಷೇತ್ರ ಮಾಹಾತ್ಮ್ಯೆ ಎರಡನೆ, ಮೂರನೇ ಹಾಗೂ ಆರನೇ ಮೇಳದಲ್ಲಿ 15ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿವೆ. ಲಲಿತೋಪಾಖ್ಯಾನ, ಅನಂತರ ಸ್ಥಾನದಲ್ಲಿದೆ. 2ನೇ ಮೇಳ ಯಶೋಮತಿ ಏಕಾವಳೀ, ಶಿಖಂಡಿ ಪರಿಣಯ, ಮದಲಸಾ ಪರಿಣಯದಂತಹ ಪ್ರಸಂಗಗಳನ್ನು ಪ್ರದರ್ಶಿಸಿವೆ. ಕಟೀಲು ಕ್ಷೇತ್ರದಲ್ಲಿ ನೂರಕ್ಕಿಂತಲೂ ಹೆಚ್ಚು ಬಯಲಾಟಗಳು ನಡೆದಿವೆ.

ಈ ಬಾರಿ ಕಟೀಲು ಮೇಳಗಳು ಮಂಗಳೂರು, ಉಡುಪಿಯಲ್ಲಿ ಅಲ್ಲದೆ ಕಾಸರಗೋಡು, ಶಿವಮೊಗ್ಗದಲ್ಲೂ ಪ್ರದರ್ಶನ ನೀಡಿವೆ. ಮುಂದಿನ ತಿರುಗಾಟದಲ್ಲಿ ಚಿಕ್ಕಮಗಳೂರು, ಉತ್ತರಕನ್ನಡದಿಂದಲೂ ಬೇಡಿಕೆ ಬಂದಿರುವುದರಿಂದ ಆ ಕಡೆ ಮೇಳದ ಪ್ರದರ್ಶನಗಳು ಕಾಣುವ ಸಾಧ್ಯತೆಗಳಿವೆ.

ಒಂದೇ ದಿನದಲ್ಲಿ ಆರೂ ಮೇಳಗಳಿಂದ ದೇವಿ ಮಹಾತ್ಮೆ ಪ್ರಸಂಗಗಳು ಈ ಬಾರಿ ಮೂರು ಕಡೆಗಳಲ್ಲಿ ಆಗಿದ್ದು ಮಾತ್ರವಲ್ಲದೆ ಒಂದೇ ದಿನ ಕಟೀಲು ಪ್ರದೇಶದಲ್ಲಿ (ಕಟೀಲು ರಥ ಬೀದಿ, ಸೌಂದರ್ಯ ಪ್ಯಾಲೆಸ್, ಶ್ರೀ ನಿಕೇತನ ಮತ್ತು ಗೋಪಲಕೃಷ್ಣ ಸಭಾಭವನ ಮತ್ತು ಸಾನಿದ್ಯ) ಒಂದೇ ದಿನ ಒಟ್ಟು ನಾಲ್ಕು ಕಡೆಗಳಲ್ಲಿ ಆಟವಾದ ಉದಾಹರಣೆಗಳು ಇದೆ.

Kinnigoli-25051802 Kinnigoli-25051803

Comments

comments

Comments are closed.