ಉಲ್ಲಂಜೆ : ದೈವ ನರ್ತಕ ದಯಾನಂದ ಸನ್ಮಾನ

ಕಿನ್ನಿಗೋಳಿ: ಹರೀಶ್ ಪೂಜಾರಿ ಅವರು ತನ್ನ ದುಡಿಮೆಯಲ್ಲಿ ಬಂದ ಆದಾಯವನ್ನು ಸಮಾಜಕ್ಕೆ ನೀಡಿ ಸಮಾಜದ ಅಭಿವೃದ್ದಿಗೆ ಶ್ರಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಹೇಳಿದರು.
ಉಲ್ಲಂಜೆ ಕೊರಗಜ್ಜ, ಮಂತ್ರದೇವತೆ ಚಾಮುಂಡೇಶ್ವರೀ ಗುಳಿಗ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ ಶ್ರದ್ದೆ ಮತ್ತು ಭಕ್ತಿಯ ಪೂಜೆ ಪುನಸ್ಕಾರದಿಂದ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಸಿದ್ದಿ ಪಡೆಯುತ್ತಿದೆ ಕ್ಷೇತ್ರವು ಇನ್ನಷ್ಟು ಬೆಳಗಲಿ ಎಂದರು.
ಕೊಡೆತ್ತೂರು ಜಯರಾಮ ಮುಕಾಲ್ದಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿನ ಈ ಕ್ಷೇತ್ರ ಬಹಳ ಪ್ರಸಿದ್ದಿ ಪಡೆದು ಸರ್ವರ ಕಷ್ಟ ನಿವಾರಣೆ ಮಾಡುವಂತಾಗಿದೆ, ಧಾರ್ಮಿಕ ಸಾಮಾಜಿಕ ಚಟುವಟಿಕೆಗಳು ನಿರಂತರ ನಡೆಯಲಿ ಎಂದರು.
ಈ ಸಂದರ್ಭ ದೈವ ನರ್ತಕ ದಯಾನಂದ ಅವರನ್ನು ಸನ್ಮಾನಿಸಲಾಯಿತು.
ಅರಸು ಕುಂಜಿರಾಯ ದೈವಸ್ಥಾನದ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ವಿಠಲ ಪೂಜಾರಿ, ಯಶೋಧರ ಶೆಟ್ಟಿ, ಪರಮೇಶ್ವರ್, ಧರ್ಮದರ್ಶಿ ಹರೀಶ್ ಪೂಜಾರಿ, ಅಪ್ಪಿ ಪೂಜಾರ್ತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-25051801

Comments

comments

Comments are closed.

Read previous post:
Kinnigoli-24051801
ಉಳೆಪಾಡಿ – ಪ್ರತಿಷ್ಠಾ ವರ್ಧಂತಿ, ಸಾಮೂಹಿಕ ವಿವಾಹ

ಕಿನ್ನಿಗೋಳಿ: ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಸಾಧಿಸಲು ಸರಳವಾಗಿ ನಡೆಯುವ ಸಾಮೂಹಿಕ ವಿವಾಹದಿಂದ ಸಾಧ್ಯ. ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಮುನ್ನುಡಿ ಎಂದು ಮೂಲ್ಕಿ ಸೀಮೆಯ ಅರಸರಾದ ಕೆ....

Close