ಕಟೀಲು ಮೇಳ ಚಕ್ ವಿತರಣೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ವರುಷದ ತಿರುಗಾಟ ಶುಕ್ರವಾರ ಕೊನೆಗೊಂಡಿತು. ಈ ಸಂದರ್ಭ ನಿಧನರಾದ ಕಟೀಲು ಮೇಳದ ಭಾಗವತರಾಗಿದ್ದ ಕುಬಣೂರು ಶ್ರೀಧರ ರಾವ್ ಇವರ ಕುಟುಂಬಕ್ಕೆ ರೂ 1 ಲಕ್ಷವನ್ನು ಮುಮ್ಮೇಳ ಕಲಾವಿದರಾಗಿದ್ದ ಮೋಹನ ಶೆಟ್ಟಿಗಾರರ ಮಗ ದೇವದಾಸ ಶೆಟ್ಟಿಗಾರ್ ಕುಟುಂಬಕ್ಕೆ ರೂ. 2 ಲಕ್ಷವನ್ನು ನೀಡಲಾಯಿತು. ಯಕ್ಷಧರ್ಮ ಬೋಧಿನೀ ಟ್ರಸ್ಟ್, ಯಕ್ಷಗಾನಾಭಿಮಾನಿಗಳು ಹಾಗೂ ಮೇಳದ ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಈ ಮೊತ್ತ ನೀಡಲಾಯಿತು. ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಅಸ್ರಣ್ಣ, ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಬಜಪೆ ರಾಘವೇಂದ್ರ ಅಚಾರ್ಯ, ಬಜಪೆ ಪೋಲೀಸ್ ಠಾಣಾಧಿಕಾರಿ ಪರಶಿವ ಮೂರ್ತಿ ಉಪಸ್ಥಿತರಿದ್ದರು. ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

Kateel-26041803

Comments

comments

Comments are closed.

Read previous post:
Kateel-26041802
ಕಟೀಲು ಆರೂ ಮೇಳ- ದೇವರ ಪೂಜೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ದೇವರ ಪೂಜೆ ಶುಕ್ರವಾರ ಮಧ್ಯಾಹ್ನ ನಡೆಯಿತು. ಕಟೀಲು ದೇವರೇ ನಮ್ಮ ಮನೆಗೆ ಬಂದು ಆಟದ...

Close