ಯುವ ಸಮುದಾಯವನ್ನು ಜಾಗೃತಿಗೊಳಿಸಿ

ಮೂಲ್ಕಿ: ಯುವ ಸಮುದಾಯವನ್ನು ಸೂಕ್ತ ಮಾರ್ಗದರ್ಶನದಲ್ಲಿ ಜಾಗೃತಿಗೊಳಿಸಿದಲ್ಲಿ ಮಾತ್ರ ಅವರಿಂದ ಮುಂದಿನ ದಿನದಲ್ಲಿ ಸಮಾಜಕ್ಕೆ ಸ್ಪಷ್ಟವಾದ ನಾಯಕತ್ವ ಸಿಗಬಹುದು, ಅವರ ಸಾಮರ್ಥ್ಯವನ್ನು ಅಳೆಯಲು ಯುವವಾಹಿನ ಸಂಸ್ಥೆ ಸೂಕ್ತವಾದ ವೇದಿಕೆಯಾಗಿದೆ ಎಂದು ಮಂಗಳೂರು ಯುವವಾಹಿನಿಯ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ರುಕ್ಕರಾಮ್ ಸಾಲ್ಯಾನ್ ಸಭಾಗೃಹದಲ್ಲಿ ಶನಿವಾರ ನಡೆದ ಯುವವಾಹಿನಿ ಮೂಲ್ಕಿ ಘಟಕದ ಮಹಾಸಭೆಯಲ್ಲಿ ಸಲಹೆಗಾರರಾಗಿ ಮಾತನಾಡಿದರು.
ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷೆ ರಕ್ಷಿತಾ ಯೋಗೀಶ್ ಕೋಟ್ಯಾನ್ ಅವರು ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತಿಸಿದರು.
ಈ ಸಂದರ್ಭದಲ್ಲಿ 2018 ಮತ್ತು 2019ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಚುನಾವಣಾಧಿಕಾರಿ ಚೇತನ್‌ಕುಮಾರ್ ಆಯ್ಕೆ ಮಾಡಿದರು.
ಮಾಜಿ ಅಧ್ಯಕ್ಷ ವಿಜಯಕುಮಾರ್ ಕುಬೆವೂರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಿಯೋಜಿತ ಅಧ್ಯಕ್ಷೆ ಕುಶಲಾ ಶೇಖರ್ ಕುಕ್ಯಾನ್, ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್, ಕೋಶಾಧಿಕಾರಿ ದಿವಾಕರ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವರದಿ ವಾಚಿಸಿ ವಂದಿಸಿದರು, ಕೋಶಾಧಿಕಾರಿ ಭಾರತೀ ಭಾಸ್ಕರ ಕೋಟ್ಯಾನ್ ಲೆಕ್ಕ ಪತ್ರ ಮಂಡಿಸಿದರು.

Mulki-26041808

Comments

comments

Comments are closed.

Read previous post:
Mulki-26041807
ಮೂಲ್ಕಿ: ಭಜನಾ ಸಂಕೀರ್ಥನೆ ಸಂಪನ್ನ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸ ಏಕಾದಶಿ ಪ್ರಯುಕ್ತ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸಂಯೋಜನೆಯಲ್ಲಿ ನಡೆದ ಭಜನಾ ಸಂಕೀರ್ಥನೆಯು ಶನಿವಾರ ಮುಂಜಾನೆ ಸೂರ್ಯೋದಯದ ಸಂದರ್ಭ...

Close