ಕಿನ್ನಿಗೋಳಿ : ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗಾಗಿ ಸಕಲ ಪ್ರೋತ್ಸಾಹ ನೀಡುತ್ತಿದ್ದು ಅದನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿಯ ರಾಜರತ್ನಾಪುರ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಶನಿವಾರ ನಡೆದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಶಾಸಕರಾಗಿ ಆಯ್ಕೆಯಾದ ಉಮಾನಾಥ ಕೊಟ್ಯಾನ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮನು ಕಶ್ಯಪ್ ಅವರನ್ನು ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಅಭಿಲಾಷ್ ಶೆಟ್ಟಿ, ಕಟೀಲು, ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಸೋಂದ ಭಾಸ್ಕರ ಭಟ್, ರಾಮಪ್ರಸಾದ್, ಜಯಾನಂದ ಮೂಲ್ಕಿ, ಸಂತೋಷ್ ಶೆಟ್ಟಿ, ಚಂದ್ರಹಾಸ್ ಕಟೀಲ್, ಮೋನಪ್ಪ ಗುಜರನ್, ಭಾಸ್ಕರ್ ಪೂಜಾರಿ ಉಲ್ಲಂಜೆ, ಮೋರ್ಗನ್ ವಿಲಿಯಂ ಸ್ವಾಗತಿಸಿದರು. ವೀರಮಾರುತಿ ವ್ಯಾಯಮ ಶಾಲೆಯ ಅಧ್ಯಕ್ಷ ಈಶ್ವರ್ ಕಟೀಲ್ ಪ್ರಸ್ತಾವನೆಗೈದರು. ಜಿಮ್ ಶಿಕ್ಷಕ ಕೇಶವ ಕರ್ಕೇರ ವಂದಿಸಿದರು. ಗುರುರಾಜ್ ಮಲ್ಲಿಗೆಯಂಗಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-28051802

Comments

comments

Comments are closed.

Read previous post:
Kinnigoli-28051801
ಕಿನ್ನಿಗೋಳಿ ಬಿಜೆಪಿ ವಿಜಯೋತ್ಸವ

ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಉಮಾನಾಥ ಕೋಟ್ಯಾನ್ ಅವರ ವಿಜಯೋತ್ಸವ ಮೆರವಣಿಗೆ ಭಾನುವಾರ ಕಟೀಲು ಕಿನ್ನಿಗೋಳಿ ಪರಿಸರದಲ್ಲಿ ನಡೆಯಿತು ಈ ಸಂದರ್ಭ ಸಾವಿರಾರು ಬಿಜೆಪಿ...

Close