ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮೂಲ್ಕಿ: ವಿದ್ಯಾರ್ಥಿಗಳು ಲಭ್ಯ ಸಹಾಯ ಸಹಕಾರಗಳನ್ನು ಸದುಪಯೋಗಗೊಳಿಸಿ ಜೀವನದಲ್ಲಿ ಸಾಧಕರರಾಗಿ ಹೊರಹೊಮ್ಮುವುದರೊಂದಿಗೆ ತಾವೂ ಅಶಕ್ತ ವಿದ್ಯಾರ್ಥಿಗಳ ಶೈಕ್ಷಣಿಕ ಆಶ್ರಯದಾತರಾಗಿ ಮೂಡಿಬರಬೇಕು ಎಂದು ನ್ಯಾಯವಾದಿ ಎಂ. ಭಾಸ್ಕರ ಹೆಗ್ಡೆ ಹೇಳಿದರು.
ಮೂಲ್ಕಿ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 6ನೇ ವಾರ್ಷಿಕ ಸುಮಾರು 1 ಲಕ್ಷರೂ ವೆಚ್ಚದಲ್ಲಿ 86 ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶೈಕ್ಷಣಿಕ ಸಲಕರಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಜೀವನದ ಅಭ್ಯುದಯ ಸಾಧ್ಯ ಎಂಬ ತಿಳುವಳಿಕೆ ಇರಿಸಿ ಉನ್ನತ ಶಿಕ್ಷಣ ಗಳಿಕೆಯತ್ತ ವಿದ್ಯಾರ್ಥಿಗಳು ಚಂತನೆ ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ ಮಾತನಾಡಿ, ಶ್ರಮ ಜೀವಿಗಳಾದ ರಿಕ್ಷಾ ಚಾಲಕರು ನಮ್ಮ ಸಂಘಟನೆಗಾಗಿ ಕೂಡಿಟ್ಟ ಮೊತ್ತದಿಂದ ಹಾಗೂ ದಾನಿಗಳ ಸಹಕಾರದಿಂದ ಶೈಕ್ಷಣಿಕ ಸಹಕಾರ ನೀಡುತ್ತಾ ಬಂದಿರುವುದು ಅಭಿನಂದನೀಯ ಎಂದರು.
ಅತಿಥಿಗಳಾಗಿ ಹೆಜಮಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಸಂಘದ ಅಧ್ಯಕ್ಷ ಮೋಹನ್ ಕುಬೆವೂರು, ಕಾರ್ಯದರ್ಶಿ ಪ್ರವೀಣ್ ಕಾಮತ್, ಕೋಶಾಧಿಕಾರಿ ಕೃಷ್ಣಪ್ಪ ಸನಿಲ್ ಮಾನಂಪಾಡಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಾದ ಮನಿಷಾ ಅಮೀನ್, ಲವೀನಾ ಪುರ್ತಾದೊ,ಶ್ವೇತಾ ಎಸ್. ಕೋಟ್ಯಾನ್ ರವರನ್ನು ಹೆತ್ತವರೊಂದಿಗೆ ಸನ್ಮಾನಿಸಲಾಯಿತು. ಈ ಸಂದರ್ಭ ಬಾಲವಾಡಿಯಿಂದ ಪದವಿ ಶಿಕ್ಷಣದ ವರೆಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಲಕರಣೆ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಮೋಹನ್ ಕುಬೆವೂರು ಸ್ವಾಗತಿಸಿದರು, ಶ್ರೀನಿವಾಸ ಕೊಲಕಾಡಿ ನಿರೂಪಿಸಿದರು, ಕೃಷ್ಣಪ್ಪ ಸನಿಲ್ ವಂದಿಸಿದರು.

Mulki-28051801

Comments

comments

Comments are closed.

Read previous post:
Kinnigoli--26041809
ಗೋಳಿದಡಿ: ಮೃತ್ಯುಂಜಯ ಹೋಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಮಾಗಣೆಯ ಕಿಲೆಂಜೂರು ಗ್ರಾಮದ ಗೋಳಿದಡಿ ಎಂಬಲ್ಲಿ ಜೀರ್ಣವಸ್ಥೆಯಲ್ಲಿರುವ ಪುರಾತನ ಶಿವ ಸಾನಿಧ್ಯದ ಪೂರ್ಣ ವಿಮರ್ಶೆಯ ಬಗ್ಗೆ ಮೇ 27 ಮತ್ತು 28 ರಂದು ನಡೇಯಲಿರುವ ಅಷ್ಟಮಂಗಳ...

Close