ಶಿಕ್ಷಕ ಅಲೆಗ್ಸಾಂಡರ್ ಮಿನೇಜಸ್

ಕಿನ್ನಿಗೋಳಿ : ನಿವೃತ್ತ ಶಿಕ್ಷಕ ಅಲೆಗ್ಸಾಂಡರ್ ಮಿನೇಜಸ್(89 ವರ್ಷ) ಭಾನುವಾರ ನಿಧನರಾದರು.
ಐಕಳ ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕರಾಗಿ ನಿವೃತ್ತರಾಗಿದ್ದ ಅವರು ಅನೇಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿದ್ದರು. ಮಡಿಕೇರಿಯ ಸೈಂಟ್ ಮೈಕಲ್ಸ್ ಪ್ರೌಢಶಾಲೆ, ಪದುವಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕೊಡುಗೈದಾನಿಯಾಗಿ ಜನಾನುರಾಗಿಯಾಗಿದ್ದ ಅವರು ಫಾದರ್ ಮುಲ್ಲರ‍್ಸ್ ಆಸ್ಪತ್ರೆಗೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಕಿನ್ನಿಗೋಳಿ ವೆಲ್ ಫೇರ್ ಸೊಸೈಟಿ, ಮಲ್ಟಿಪರ್ಪಸ್ ಕೋಅಪರೇಟಿವ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿದ್ದರು.

Kinnigoli-28051807

Comments

comments

Comments are closed.

Read previous post:
Kinnigoli-28051806
ಮೇ 30: ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯ ಭಕ್ತರಿಂದ ಹಿಂದಿನಿಂದಲೂ ನಡೆಕೊಂಡು ಬಂದಿರುವಂತೆ ಲೋಕ ಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭಿಕ್ಷೆಗಾಗಿ ಸಿಯಾಳಾಭಿಷೇಕ...

Close