ಸ್ವಚ್ಚತೆಗಾಗಿ ಒಂದು ಗೂಡೋಣ

ಕಿನ್ನಿಗೋಳಿ: ಸ್ವಚ್ಚ ಭಾರತದ ಕಲ್ಪನೆಗಾಗಿ ಸಂಘ ಸಂಸ್ಥೆಗಳ ಮೂಲಕ ನಾವೆಲ್ಲ ಒಂದು ಗೂಡೋಣ, ಶುದ್ಧ ಪರಿಸರ ನಿರ್ಮಾಣ ಮಾಡೋಣ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರು ಗ್ರಾಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ಮಂಗಳೂರು ನೆಹರು ಯುವ ಕೇಂದ್ರದ ಸಹಕಾರದಲ್ಲಿ ಭಾನುವಾರ ನಡೆದ ಸ್ವಚ್ಚ ಭಾರತ್ ಬೇಸಿಗೆ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕ್ಲಬ್‌ನ ಸದಸ್ಯರು ಸ್ಥಳೀಯ ಕಿಂಡಿಅಣೆಕಟ್ಟಿನ ಪರಿಸರದಲ್ಲಿ ಶ್ರಮದಾನ ಮಾಡಿ ಸ್ವಚ್ಚತಾ ಕಾರ್ಯ ಮಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌ಕುಮಾರ್, ಕ್ಲಬ್‌ನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಕಾರಿ ಪ್ರಶಾಂತ್‌ಕುಮಾರ್ ಬೇಕಲ್, ಸುರೇಶ್ ಶೆಟ್ಟಿ, ಸಂತೋಷ್ ದೇವಾಡಿಗ, ಸುನಿಲ್ ಜಿ., ದೀಪಕ್ ದೇವಾಡಿಗ, ಶಂಕರ ಪೂಜಾರಿ, ಜಯಂತ್ ಕುಂದರ್, ಯೂನಸ್, ದೀಪಕ್ ಸುವರ್ಣ, ನೀರಜ್, ವಿಕ್ಷಿತ್ ದೇವಾಡಿಗ, ಜಗದೀಶ್ ಕುಲಾಲ್, ಜಗದೀಶ್ ಕುಮಾರ್, ವಸಂತ ದೇವಾಡಿಗ, ವಿಶ್ವನಾಥ ಕೋಟ್ಯಾನ್, ನಾರಾಯಣ್ ಜಿ.ಕೆ., ಗಣೇಶ್ ದೇವಾಡಿಗ, ಸುಭಾಸ್ ಅಮೀನ್, ಶಶಿಧರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-28051803

Comments

comments

Comments are closed.

Read previous post:
Kinnigoli-28051802
ಕಿನ್ನಿಗೋಳಿ : ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗಾಗಿ ಸಕಲ ಪ್ರೋತ್ಸಾಹ ನೀಡುತ್ತಿದ್ದು ಅದನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ...

Close