ಕಿನ್ನಿಗೋಳಿ ಹಳೆಯಂಗಡಿ ಅಲ್ಲಲ್ಲಿ ರಸ್ತೆಯಲ್ಲಿ ನೀರು

ಕಿನ್ನಿಗೋಳಿ : ಎಸ್‌ಕೋಡಿ ಯಲ್ಲಿ ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಎಸ್ ಕೋಡಿ ಜಂಕ್ಷನ್‌ನಲ್ಲಿನ ಕಟ್ಟೆಯ ಮರ ಬಿದ್ದು ಪಕ್ಕದ ಮನೆ ಹಾಗೂ ಅಂಗಡಿಗಳಿಗೆ ಹಾನಿಯಾಗಿದೆ.

ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಸುರಿದ ಬಾರಿ ಮಳೆಗೆ ಪುರುಷೋತ್ತಮ ಶೆಟ್ಟಿ ಹಾಗೂ ಪಕ್ಕದ ಪ್ರತಾಪ್ ಸ್ಟೋರ‍್ಸ್ ಅಂಗಡಿಗಳಿಗೆ ಮಳೆಯ ನೀರು ನುಗ್ಗಿ ನಷ್ಟ ಉಂಟಾಗಿದೆ. ಕಿನ್ನಿಗೋಳಿ ಮುಖ್ಯ ರಸ್ತೆ ಸುಖಾನಂದ ಶೆಟ್ಟಿ ವೃತ್ತ ಬಳಿ ರಸ್ತೆಯಲ್ಲಿಯೇ ನೀರು ನಿಂತಿತ್ತು.
ಮೂರುಕಾವೇರಿಯಿಂದ ಮುಲ್ಕಿ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಸೂಕ್ತ ಚರಂಡಿ ವ್ಯವಸ್ಥೆ ಮಾಡದಿರುವ ಕಾರಣ ರಸ್ತೆಯಲ್ಲಿಯೇ ನೀರು ಹರಿಯುತ್ತಿರುವುದು ಕಂಡು ಬಂತು. ಕಿನ್ನಿಗೋಳಿ ಮತ್ತು ಮೂರುಕಾವೇರಿ ಮುಖ್ಯ ರಸ್ತೆಯಲ್ಲಿಯೇ ನೀರು ನಿಂತು ಕಳಪೆ ಮಂದಗತಿಯ ಕಾಮಗಾರಿ ಎದ್ದು ತೋರುತ್ತಿದೆ. ಕೆಂಚನಕೆರೆ ತಿರುವು ಬಳಿ ಮಳೆ ನೀರು ನಿಂತು ಸಂಪೂರ್ಣವಾಗಿ ಕೆಸರುಮಯ ರಸ್ತೆಯಾಗಿದೆ.
ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸದೇ ಇರುವುದರಿಂದ ಹೆದ್ದಾರಿ ಮೇಲೆ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ಇಲ್ಲಿನ ರೈಲ್ವೇ ರಸ್ತೆಯಲ್ಲಿಯೂ ಸಹ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಚರಂಡಿ ಇಲ್ಲದೇ ವಾಹನಗಳ ಸಂಚಾರದಿಂದ ಮಳೆಯ ಕೆಸರು ಮಿಶ್ರಿತ ನೀರು ಪಾದಾಚಾರಿಗಳಿಗೆ ಕಾರಂಜಿಯಂತೆ ಸಿಂಪಡನೆಯಾಗುತ್ತಿತ್ತು.
ಹಳೆಯಂಗಡಿ ಪರಿಸರದ ಕೊಪ್ಪಲ, ಕರಿತೋಟದ ಬಳಿ ಬೃಹತ್ ವಾಣಿಜ್ಯ ಜಾಹಿರಾತು ಬೋರ್ಡ್ ಗಾಳಿ ಮಳೆಗೆ ಸಿಲುಕಿ ಧರೆಶಾಹಿಯಾಗಿದ್ದು ನೇರವಾಗಿ ಸ್ಥಳೀಯ ವಿದ್ಯುತ್ ತಂತಿಗಳ ಮೇಲೆ ಬಿದ್ದುದರಿಂದ ಪರಿಸರದಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
ಪಿಸಿಎ ಬ್ಯಾಂಕ್ ಬಳಿ ಹಾಗೂ ಒಳ ಪೇಟೆಯಲ್ಲಿನ ನೀರು ಚರಂಡಿಯಲ್ಲಿ ಹರಿಯದೇ ರಸ್ತೆಯ ಮೇಲೆಯೇ ಹರಿದು ವಾಹನಗಳ ಸಂಚಾರಕ್ಕೆ ಹಾಗೂ ಪಾದಾಚಾರಿಗಳಿಗೆ ತೊಂದರೆಯಾಗಿದೆ.
ಕದಿಕೆ-ಕಡಪುರ ಎಂಬಲ್ಲಿ ಕೇಸರಿ ಎಂಬ ಮಹಿಳೆಯ ಮನೆಗೂ ನೀರು ನುಗ್ಗಿದ್ದು ಮನೆಯಲ್ಲಿನ ಅಮೂಲ್ಯ ವಸ್ತುಗಳು ನೀರಿನಿಂದ ಆವೃತವಾಗಿದೆ. ಕದಿಕೆ-ಹೊಗೆಗುಡ್ಡೆ ರಸ್ತೆಯ ನಂದಿನಿ ನದಿ ಬಳಿಯಲ್ಲಿಯೂ ಸಹ ನದಿ ನೀರು ಹರಿಯಲು ಅಡಚಣೆ ಉಂಟಾಗಿ, ಮೋರಿಗಳ ಪೈಪ್‌ನಲ್ಲಿ ಹೂಳೆತ್ತದೆ ನೀರು ರಸ್ತೆ ಮೇಲೆ ಹರಿದು ತಡೆಗೋಡೆ ಕುಸಿತ ಕಂಡಿದೆ.

Kinnigoli-30051801

ಕಿನ್ನಿಗೋಳಿ ಮುಖ್ಯ ರಸ್ತೆ ಸುಖಾನಂದ ಶೆಟ್ಟಿ ವೃತ್ತ ಬಳಿ ರಸ್ತೆಯಲ್ಲಿಯೇ ನೀರು ನಿಂತಿತ್ತು. 

Kinnigoli-30051802

ಮೂರುಕಾವೇರಿ ಮುಖ್ಯ ರಸ್ತೆಯಲ್ಲಿಯೇ ನೀರು
Kinnigoli-30051803

ಕೆಂಚನಕೆರೆ ತಿರುವು ಬಳಿ ಮಳೆ ನೀರು ನಿಂತು ಸಂಪೂರ್ಣವಾಗಿ ಕೆಸರುಮಯ ರಸ್ತೆಯಾಗಿದೆ.

Kinnigoli-30051804

ಎಸ್‌ಕೋಡಿ ಮರ ಬಿದ್ದು ಹಾನಿ

Comments

comments

Comments are closed.

Read previous post:
Kinnigoli-28051807
ಶಿಕ್ಷಕ ಅಲೆಗ್ಸಾಂಡರ್ ಮಿನೇಜಸ್

ಕಿನ್ನಿಗೋಳಿ : ನಿವೃತ್ತ ಶಿಕ್ಷಕ ಅಲೆಗ್ಸಾಂಡರ್ ಮಿನೇಜಸ್(89 ವರ್ಷ) ಭಾನುವಾರ ನಿಧನರಾದರು. ಐಕಳ ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕರಾಗಿ ನಿವೃತ್ತರಾಗಿದ್ದ ಅವರು ಅನೇಕ...

Close