ಮೂಲ್ಕಿ: ಕಲ್ಲಾಪು ಉಚಿತ ಪುಸ್ತಕ ವಿತರಣೆ

ಮೂಲ್ಕಿ: ಶಿಕ್ಷಣಕ್ಕೆ ನೆರವು ನೀಡಿದ ಸಂಸ್ಥೆಯನ್ನು ಜೀವನದ ಉದ್ದಕ್ಕೂ ಮರೆಯದೇ, ನಮ್ಮ ಸಾಮರ್ಥ್ಯ ವೃದ್ಧಿಸಿಕೊಂಡಾಗ ಸಂಸ್ಥೆಗೆ ಆಸರೆಯಾಗಿ ಬೆಳೆಯಬೇಕು, ಆಗ ಇನ್ನಷ್ಟು ನೆರವು ನೀಡಲು ಆ ಸಂಸ್ಥೆ ಶಕ್ತವಾಗುತ್ತದೆ ಎಂದು ಸಮಾಜ ಸೇವಕ ಕಮಲಾಕ್ಷ ಡಿ. ಶೆಟ್ಟಿಗಾರ್ ಹೇಳಿದರು.
ಅವರು ಮೂಲ್ಕಿ ಬಳಿಯ ಕಲ್ಲಾಪು ಶ್ರೀ ವೀರಭದ್ರ ಮಹಾಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾ ವೇದಿಕೆಯ ಜಂಟಿ ಆಶ್ರಯದಲ್ಲಿ ವೀರಭದ್ರ ಮಹಮ್ಮಾಯಿ ದೇವಳದ ಸಭಾಂಗಣದಲ್ಲಿ ಭಾನುವಾರ ನಡೆದ 56ನೇ ವಾರ್ಷಿಕ ಮಹಾ ಸಭೆಯ ಮತ್ತು ಉಚಿತ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕ ಮಂಡಲದ ಆಧ್ಯಕ್ಷ ಶಂಕರ್ ಶೆಟ್ಟಿಗಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಉದ್ಯಮಿ ಜಯರಾಮ್. ಎಮ್. ಶೆಟ್ಟಗಾರ್, ಶ್ರೀ ಕ್ಷೇತ್ರದ ಗುರಿಕಾರರು, ಆಡಳಿತ ಮಂಡಲಿಯ ಅಧ್ಯಕ್ಷರಾದ ವೀರಪ್ಪ ಶೆಟ್ಟಿಗಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ವಿಪುಲ ಡಿ. ಶೆಟ್ಟಿಗಾರ್, ಪದಾಧಿಕಾರಿಗಳು ಇದ್ದರು.

Kinnigoli-30051805

Comments

comments

Comments are closed.

Read previous post:
Kinnigoli-30051802
ಕಿನ್ನಿಗೋಳಿ ಹಳೆಯಂಗಡಿ ಅಲ್ಲಲ್ಲಿ ರಸ್ತೆಯಲ್ಲಿ ನೀರು

ಕಿನ್ನಿಗೋಳಿ : ಎಸ್‌ಕೋಡಿ ಯಲ್ಲಿ ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಎಸ್ ಕೋಡಿ ಜಂಕ್ಷನ್‌ನಲ್ಲಿನ ಕಟ್ಟೆಯ ಮರ ಬಿದ್ದು ಪಕ್ಕದ ಮನೆ ಹಾಗೂ ಅಂಗಡಿಗಳಿಗೆ ಹಾನಿಯಾಗಿದೆ. ಕಿನ್ನಿಗೋಳಿ ಬಸ್...

Close