ಕೃತಕ ನರೆಯಲ್ಲಿ ಸಿಲುಕಿದ್ದ ತಾಯಿ, ಮಗಳ ರಕ್ಷಣೆ

ಮೂಲ್ಕಿ: ಸುತ್ತಲೂ ವಿದ್ಯುತ್ ಇಲ್ಲದೇ ದಟ್ಟವಾದ ಕತ್ತಲು, ತಗ್ಗು ಪ್ರದೇಶದಲ್ಲಿದ್ದ ಆ ಮನೆಯಲ್ಲಿ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಆಕೆಯ ಹದಿಹರೆಯದ ಮಗಳು ಕೃತಕ ನೆರೆಯಲ್ಲಿ ಮನೆಯೊಳಗೆ ಸಿಲುಕಿಕೊಂಡಿದ್ದರು. ಮನೆಯ ಹಟ್ಟಿಯಲ್ಲಿ ಹಸು, ಕರುಗಳು ನೆರೆಯಲ್ಲಿ ಸಿಲುಕಿದ್ದವು, ಮನೆಯ ಹತ್ತಿರ ತೆರಳ ಬೇಕಾದರೆ ದೋಣಿಯಿಂದ ಮಾತ್ರ ಸಾಧ್ಯವಿತ್ತು ಆದರೂ ರಕ್ಷಣೆಗೆ ನಿಂತ ತಂಡವು ಕೇವಲ ಹಗ್ಗದ ಮೂಲಕ ಇಬ್ಬರನ್ನು ಮೂಕ ಪ್ರಾಣಿಗಳನ್ನು ರಕ್ಷಿಸಿ ಯಶಸ್ವಿ ಕಾರ್ಯಾಚರಣೆ ಮುಗಿದಾಗ ಗಂಟೆ ರಾತ್ರಿ 11 ದಾಟಿತ್ತು ಇದು ಮೂಲ್ಕಿ ಬಳಿಯ ಕಿಲ್ಪಾಡಿಯಲ್ಲಿ ಮಂಗಳವಾರ ತಡರಾತ್ರಿ ನಡೆದ ಘಟನೆ.
ಧಾರಾಕಾರವಾಗಿ ಸುರಿದ ಮಳೆಯಿಂದ ಕಿಲ್ಪಾಡಿ ಕುಮಾರಮಂಗಿಲದ ದೇವಸ್ಥಾನದ ಬಳಿಯ ಜನನಿ ಶೆಡ್ತಿ ಹಾಗೂ ಆಕೆಯ ಮಗಳು ಲೋಲಾಕ್ಷಿ ವಾಸಿಸುತ್ತಿದ್ದ ಮನೆಯು ಜಲಾವೃತಗೊಂಡ ಸ್ಥಿತಿಯಲ್ಲಿದೆ ಎಂದು ಪಂಚಾಯತ್‌ನ ಸಿಬ್ಬಂದಿಯೊಬ್ಬರಿಗೆ ರಾತ್ರಿ ದೂರವಾಣಿ ಕರೆ ಬಂದಿದ್ದರಿಂದ ಸಹಾಯ ಮಾಡಲು ಅಧ್ಯಕ್ಷ ಶ್ರೀಕಾಂತ್ ರಾವ್ ಮತ್ತು ಸದಸ್ಯ ನಾಗರಾಜ್‌ಕುಲಾಲ್ ಸಜ್ಜಾಗಿದ್ದರೂ ಮನೆಯ ಹತ್ತಿರ ಸಾಗಲು ಸಹ ಕಷ್ಟ ಸಾಧ್ಯವಾಗಿತ್ತು. ಅಷ್ಟೊಂದು ನೀರು ಏರಿಕೆ ಕಂಡಿತ್ತು.
ಮೂಲ್ಕಿ ವ್ಯಾಪ್ತಿಯಲ್ಲಿ ದೋಣಿಯ ಸೌಲಭ್ಯ ಇಲ್ಲದಿದ್ದರಿಂದ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಸ್ವತಹ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅವರು ಅವರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ಸುಮಾರು ಎರಡು ತಾಸುಗಳ ಕಾರ್ಯಾಚರಣೆಯನ್ನು ನಡೆಸಿ ಮನೆ ಮಂದಿಯನ್ನು ರಕ್ಷಿಸಿದ್ದಾರೆ. ಅವರಿಬ್ಬರನ್ನು ಸುರಕ್ಷಿತವಾಗಿ ಸ್ಥಳೀಯ ನಿವಾಸಿ ಹೇಮಲತಾ ಭಟ್ ಅವರ ಮನೆಯಲ್ಲಿ ಆಶ್ರಯ ನೀಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರೊಂದಿಗೆ ಸಿಬ್ಬಂದಿಗಳಾದ ರಮೇಶ್ ಬಂಗೇರ, ಕಂದಾಯ ಇಲಾಖೆಯ ಮಂಜುನಾಥ್, ಭಾಸ್ಕರ ಪೂಜಾರಿ, ಸಹಾಯಕ ತಾರಾನಾಥ್ ಶೆಟ್ಟಿಗಾರ್, ಪೊಲೀಸ್ ಸಿಬ್ಬಂದಿಗಳಾದ ಸಿದ್ದು, ಹುಸೈನ್, ಪ್ರಮೋದ್‌ಕುಮಾರ್, ಮೊಹಮ್ಮದ್ ನಜಾಬ್ ಸಹಕರಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಸದಸ್ಯ ನಾಗರಾಜ್ ಕುಲಾಲ್ ನೆರೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದಾಗ ಕತ್ತಲೆಯಾಗಿತ್ತು ಆದರೂ ಪ್ರಯತ್ನ ಮಾಡೋಣ ಎಂದು ಆರಂಭದಲ್ಲಿ ದೋಣಿಯನ್ನು ಹುಡುಕಾಡಿದೆವು ಸಾಧ್ಯವಾಗಲಿಲ್ಲ ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅವರು ಧೈರ್ಯ ತುಂಬಿ ಕೇವಲ ಹಗ್ಗದ ಸಹಾಯದಲ್ಲಿ ಮನೆಯವರನ್ನು ಹಾಗೂ ಹಸು-ಕರುಗಳನ್ನು ರಕ್ಷಿಸಿದ್ದೇವೆ ಸಂಪೂರ್ಣವಾಗಿ ಕತ್ತಲಿನಲ್ಲಿಯೇ ಕಾರ್ಯಾಚರಣೆ ನಡೆಸಿದ್ದರಿಂದ ನಾವು ಸಹ ಎಲ್ಲಿ ನೆರೆಯಲ್ಲಿ ಕೊಚ್ಚಕೊಂಡು ಹೋಗುತ್ತೇವೆಯೋ ಎಂಬ ಭಯ ಇತ್ತು ಎಂದು ಘಟನೆಯನ್ನು ವಿವರಿಸಿದ್ದಾರೆ.

Kinnigoli-30051807 Kinnigoli-30051808

Comments

comments

Comments are closed.

Read previous post:
Kinnigoli-30051806
ಐಕಳ: ಶಾಲಾ ಪ್ರಾರಂಭೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು. ಈ ಸಂದರ್ಭ ಶಾಲಾ...

Close