ಕನಸುಗಳ ಸಾಧಕ ಸಂತೋಷ್ ಶೆಟ್ಟಿ ಅಂತ್ಯ

ಕಿನ್ನಿಗೋಳಿ : ಕನಸು ಕಣ್ಣು ತೆರೆದಾಗ ಸಿನಿಮಾ ಕಥೆ ಬರೆದು ನಿರ್ದೇಶನ ಮಾಡಿದ್ದರು. ಇದು ಮಕ್ಕಳ ಸಿನಿಮಾವಾಗಿತ್ತು. ಗಂಧದ ಕುಡಿ ಈಗ ನಿರ್ಮಿಸುತ್ತಿದ್ದ ಸಿನಿಮಾ. ಇದು ಪರಿಸರ ಸಂರಕ್ಷಣೆ ಆಧಾರಿತ ಮಕ್ಕಳ ಸಿನಿಮಾವಾಗಿತ್ತು. ಗಿಡಕ್ಕೆ ಜೀವ ಇದೆ ಎಂದು ಮಗು ಸಾಧಿಸಿ ತೋರಿಸುವ ಕಥಾ ವಸ್ತುವಿದ್ದ ಸಿನಿಮಾ ಆಗಿತ್ತು. ಇದರಲ್ಲಿ ವಿಜ್ಞಾನಿಯ ಪಾತ್ರ ಮಾಡಿದ್ದ ಸಂತೋಷ್ ಅದಕ್ಕಾಗಿ ಗಡ್ಡ ಬಿಟ್ಟಿದ್ದರು. ಈ ಸಿನಿಮಾ ಕನ್ನಡ ಮತ್ತು ಹಿಂದಿಯಲ್ಲಿ ಚಂದನವನ್ ಹೀಗೆ ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿತ್ತು. ಕಥೆ, ಚಿತ್ರ ಕಥೆ ಮತ್ತು ನಿರ್ದೇಶನ ಇವರದೇ ಆಗಿತ್ತು. ಬಹುಶಃ ಈ ಸಿನಿಮಾ ಪ್ರಚಾರದ ಸ್ಟಿಲ್ ಫೋಟೋಗಳಿಗಾಗಿ ಹೋಗಿದ್ದ ಸಂದರ್ಭ ಜಲಪಾತಕ್ಕೆ ಬಿದ್ದು ಇನ್ನಿಲ್ಲವಾಗಿದ್ದಾರೆ.
ಮಂಗಳೂರಿನಲ್ಲಿ ಎಸ್‌ಡಿಎಸ್ ಕಾಲೇಜು ಪಕ್ಕದಲ್ಲಿ ಇಮೇಜಿನೇಷನ್ ಮೂವಿಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಇಲ್ಲಿ ಸಿನಿಮಾ ಎಡಿಟಿಂಗ್ ಮಾಡಲಾಗುತ್ತಿತ್ತು. ಮೊದಲು ತ್ರಿಡಿ ಮಾಡೆಲ್ ಮಾಡುತ್ತಿದ್ದರು. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದ್ದ ಅವರು ಸಾಧನೆಯಿಂದ ಮೇಲೆ ಬರುತ್ತಿದ್ದರು. ಆಧ್ಯಾತ್ಮದ ಬಗ್ಗೆ ಮುಂದಿನ ಸಿನಿಮಾ ಮಾಡುವ ಕನಸಿತ್ತು. ಕಟೀಲು ಕ್ಷೇತ್ರದ ಸಿನಿಮಾ ಮಾಡುವ ಕನಸೂ ಇತ್ತು. ಅನೇಕ ಸಂಸ್ಥೆಗಳ ನೂರಾರು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದ ಸಂತೋಷ್ ಶಾಲಾ ದಿನಗಳಲ್ಲಿ ಪುಟಾಣಿ ಹೆಲಿಕಾಫ್ಟರ್, ಹಡಗುಗಳಂತಹ ಮಾಡೆಲ್‌ಗಳನ್ನು ನಿರ್ಮಿಸಿ ಶಿಕ್ಷಕರ ಅಚ್ಚರಿಗೆ ಪಾತ್ರರಾಗಿದ್ದರು. ಬೆಂಗಳೂರು ಟೊಯೊಟಾ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಸಂತೋಷ್ ಜೋದಾ ಅಕ್ಬರ್, ಮಂಗಲ್ ಪಾಂಡೆ ಬಾಲಿವುಡ್ ಸಿನಿಮಾಗಳಲ್ಲಿ ಅಸಿಸ್ಟೆಂಟ್ ಸೆಟ್ ಡಿಸೈನರ್ ಆಗಿ ಕೆಲಸ ಮಾಡಿದ್ದರು.
ಕಟೀಲು ಜಾತ್ರೆ ಸಂದರ್ಭ ರಥ ಎಳೆಯುವುದು ಇತ್ಯಾದಿ ಸೇವೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದ ಸಂತೋಷ್ ಶೆಟ್ಟಿ ಇತ್ತೀಚಿಗಷ್ಟೇ ಕಟೀಲು ಮಿತ್ತಬೈಲಿನಲ್ಲಿ ಮನೆ ಕಟ್ಟಿದ್ದರು. ಕೃಷಿಕರಾದ ತಂದೆ ಶಂಕರ್, ತಾಯಿ ಲೀಲಾ ಹಾಗೂ ಒಬ್ಬ ಅಣ್ಣ, ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ.
ಕಟೀಲು ಸಿತ್ಲದ ಮನೆಯಲ್ಲಿ ಬುಧವಾರ ಸಂಜೆ ಸಂತೋಷ್ ಶೆಟ್ಟಿ ಅಂತ್ಯಕ್ರಿಯೆ ನಡೆಯಿತು.

Kinigoli-31051804 Kinigoli-31051805

Comments

comments

Comments are closed.

Read previous post:
Kinigoli-31051803
ಮೂರು ಕಾವೇರಿ ರಸ್ತೆ ಅಂಚಿನಲ್ಲಿ ಹೊಂಡ

ಕಿನ್ನಿಗೋಳಿ : ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ರಸ್ತೆ ಅಂಚಿನಲ್ಲಿ ಹೊಂಡಗಳು ಬಿರುಕುಬಿಟ್ಟಿದೆ. ಇದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಸಮಸ್ಯೆ ಉಂಟಾಗಿದೆ. ಮೂರು...

Close