ಕೆರೆಕಾಡು : ಪುಸ್ತಕ ವಿತರಣೆ

ಕಿನ್ನಿಗೋಳಿ : ಹಿಂದಿನ ಕಾಲದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಪದವಿಗಳಿಂದ ವಂಚಿತರಾಗುತ್ತಿದ್ದರು. ಆದರೆ, ಇದೀಗ ಶಿಕ್ಷಣದ ಬಗ್ಗೆ ಅರಿವು ಮೂಡಿದ್ದು, ಕೂಲಿ ಕಾರ್ಮಿಕರ ಮಕ್ಕಳಿಂದ ಹಿಡಿದು ಎಲ್ಲರೂ ಶಿಕ್ಷಣ ಪಡೆಯಲು ಸಾಧ್ಯವಾಗಿದೆ’ ಎಂದು ಉದ್ಯಮಿ ಪಟೇಲ್ ವಾಸುದೇವರಾವ್ ಪುನರೂರು ಹೇಳಿದರು.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬುಧವಾರ ನಡೆದ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ಶ್ರೀ ಕೇಶವ ವಿದ್ಯಾ ಯೋಜನಾ, ಮೂಲ್ಕಿ ಗ್ರಾಮ ವಿಕಾಸ ಸಮಿತಿ, ಲೋಖ ಮುಖೀ ಟ್ರಸ್ಟ್ ಎಸ್.ಕೋಡಿ ಹಾಗೂ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಸಹಯೋಗದಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕೆರೆಕಾಡು ಗ್ರಾಮದ ೧೬೫ ಮಕ್ಕಳಿಗೆ ಪುಸ್ತಕ ಮತ್ತು ಕೊಡೆ ವಿತರಣೆ ಮಾಡಲಾಯಿತು. ಕೆರೆಕಾಡಿನ ದಿವ್ಯಾಂಗ ಚೇತನ ವಿದ್ಯಾರ್ಥಿನಿ ಜಯಲಕ್ಷ್ಮಿ ಆಚಾರ್ಯ ಇವರ ಉನ್ನತ ವ್ಯಾಸಂಗಕ್ಕೆ ದಾನಿಗಳ ಸಹಾಯದಿಂದ ಧನ ಸಹಾಯ ನೀಡಲಾಯಿತು. ಲೋಖ ಮುಖೀ ಟ್ರಸ್ಟ್ ಎಸ್.ಕೋಡಿಯ ಅಧ್ಯಕ್ಷ ಡಾ| ಸೋಂದ ಭಾಸ್ಕರ ಭಟ್ ಕಟೀಲು, ಮೂಲ್ಕಿ ಗ್ರಾಮ ವಿಕಾಸ ಸಮಿತಿಯ ಸಂಯೋಜಕ ಡಾ| ಶ್ರೀಕಾಂತ ರಾವ್ ಸಸಿಹಿತ್ಲು, ದಮಯಂತಿ ಶಂಕರ ಶೆಟ್ಟಿಗಾರ್, ಸುಬ್ಬಲಕ್ಷ್ಮಿ ಟೀಚರ್, ರಾಮಚಂದ್ರ ಶೆಣೈ, ರಾಘವೇಂದ್ರ ರಾವ್, ಶಿವಶಂಕರ ಅಂಗರಗುಡ್ಡೆ, ರಮೇಶ್ ಕೆರೆಕಾಡು, ಟಿ.ಎನ್. ರವೀಂದ್ರನ್, ಗಣೇಶ್ ಆಚಾರ್ಯ, ಭಜನಾ ಮಂದಿರದ ಅಧ್ಯಕ್ಷ ಮನೋಹರ್ ಜಿ. ಕುಂದರ್, ನಾರಾಯಣ ಮಾಸ್ಟರ್, ಮಾಧವ ಶೆಟ್ಟಿಗಾರ್, ಹರ್ಷ ಮತ್ತಿತರರು ಉಪಸ್ಥಿತರಿದ್ದರು.

Kinigoli-30051801

Comments

comments

Comments are closed.

Read previous post:
Kinnigoli-30051808
ಕೃತಕ ನರೆಯಲ್ಲಿ ಸಿಲುಕಿದ್ದ ತಾಯಿ, ಮಗಳ ರಕ್ಷಣೆ

ಮೂಲ್ಕಿ: ಸುತ್ತಲೂ ವಿದ್ಯುತ್ ಇಲ್ಲದೇ ದಟ್ಟವಾದ ಕತ್ತಲು, ತಗ್ಗು ಪ್ರದೇಶದಲ್ಲಿದ್ದ ಆ ಮನೆಯಲ್ಲಿ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಆಕೆಯ ಹದಿಹರೆಯದ ಮಗಳು ಕೃತಕ ನೆರೆಯಲ್ಲಿ ಮನೆಯೊಳಗೆ ಸಿಲುಕಿಕೊಂಡಿದ್ದರು....

Close