ನೀಫಾ ವೈರಾಣು ಜಾಗೃತಿ ಕರಪತ್ರ ವಿತರಣೆ

ಕಿನ್ನಿಗೋಳಿ : ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕಮಂಡಲ, ಶ್ರೀ ವಿದ್ಯಾವಿನಾಯಕ ರಜತಾಸೇವಾ ಟ್ರಸ್ಟ್, ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಲವು ಜಂಟಿಯಾಗಿ ಮಂಗಳೂರಿನ ನೆಹರು ಯುವ ಕೇಂದ್ರದ ಸಹಕಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ “ನೀಫಾ ವೈರಾಣು ಜ್ವರದ ಲಕ್ಷಣಗಳು, ಹರಡುವ ವಿಧಾನ, ಮುನ್ನೆಚರಿಕೆ ಕ್ರಮದ ಬಗ್ಗೆ” ಇತ್ತೀಚಿಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು, ವಸತಿ ಸಮುಚ್ಚಯ, ಪೇಟೆಯ ಹತ್ತಿರವಿರುವ ಮನೆ ಮನೆಗೆ ತೆರಳಿ ಜಾಗೃತಿಯ ಕರಪತ್ರಿಕೆಯನ್ನು ಹಂಚುವ ಮುಖಾಂತರ ಸಾರ್ವಜನಿಕರಿಗೆ ನೀಫಾ ವೈರಾಣು ಜ್ವರದ ಬಗ್ಗೆ ಅತಂಕ ಬೇಡ ಹಾಗೂ ಎಚ್ಚರ ಇರಲಿ ಎಂಬ ಸಂದೇಶವನ್ನು ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ನಿರ್ದೇಶಕ ಸಾಹುಲ್ ಹಮೀದ್ ಕದಿಕೆ, ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಕೊಳುವೈಲು, ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳೂವೈಲು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹಿಮಕರ್ ಕದಿಕೆ, ಯುವಕ ಮಂಡಲ ಅಧ್ಯಕ್ಷ ಸುಧಾಕರ ಆರ್. ಅಮೀನ್, ಕೋಶಾಧಿಕಾರಿ ಯತೀಶ್ ಕೋಟ್ಯಾನ್, ಸಲಹಾ ಸಮಿತಿ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ಮಹಿಳಾ ಮಂಡಲ ಅಧ್ಯಕ್ಷೆ ಸುಜಾತಾ ವಾಸುದೇವ್, ಯುವತಿ ಮಂಡಲ ಅಧ್ಯಕ್ಷೆ ದಿವ್ಯಶ್ರೀ ಕೋಟ್ಯಾನ್, ಮಂಡಲ ಸದಸ್ಯರಾದ ರಾಮಚಂದ್ರ ಶೆಣೈ, ರಾಮದಾಸ್ ಪಾವಂಜೆ, ಸೋಮನಾಥ್ ದೇವಾಡಿಗ, ಮೋಹನ್ ಬಂಗೇರ, ದಾಮೋದರ್ ಗೋಳಿದಡಿ, ಯೋಗೀಶ್ ಪಾವಂಜೆ, ದಿನೇಶ್ ಎಂ. ಪೂಜಾರಿ, ಹರೀಶ್ ಸಾಲ್ಯಾನ್, ರಮೇಶ್ ಚೇಳ್ಯಾರು, ಮೋಹನ್ ಅಮೀನ್, ಜಗನ್ನಾಥ್ ಕರ್ಕೇರ, ಸೋಮಶೇಖರ್ ಶೆಟ್ಟಿ ಜೋಕಟ್ಟೆ, ಇಂದುಧರ್, ನಾಗರಾಜ್ ಪೂಜಾರಿ, ಮನೋಜ್ ಕೆಲೆಸಿಬೆಟ್ಟು ಹಾಗೂ ಯುವತಿ ಮತ್ತು ಮಹಿಳಾಮಂಡಲದ ಸದಸ್ಯರಾದ ವೀಣಾ ಕಾಮತ್, ರಾಜೇಶ್ವರಿ ರಾಮನಗರ, ಪ್ರೇಮಲತಾ ಯೋಗೀಶ್, ಸುಲೋಚನಾ ಮಹಾಬಲ್ ಅಂಚನ್, ನಿಶಾ ಮತ್ತಿತರರು ಉಪಸ್ಥಿತರಿದ್ದರು.

Kinigoli-31051806

Comments

comments

Comments are closed.

Read previous post:
Kinigoli-31051804
ಕನಸುಗಳ ಸಾಧಕ ಸಂತೋಷ್ ಶೆಟ್ಟಿ ಅಂತ್ಯ

ಕಿನ್ನಿಗೋಳಿ : ಕನಸು ಕಣ್ಣು ತೆರೆದಾಗ ಸಿನಿಮಾ ಕಥೆ ಬರೆದು ನಿರ್ದೇಶನ ಮಾಡಿದ್ದರು. ಇದು ಮಕ್ಕಳ ಸಿನಿಮಾವಾಗಿತ್ತು. ಗಂಧದ ಕುಡಿ ಈಗ ನಿರ್ಮಿಸುತ್ತಿದ್ದ ಸಿನಿಮಾ. ಇದು ಪರಿಸರ ಸಂರಕ್ಷಣೆ ಆಧಾರಿತ...

Close