ತಾಳಗುರಿ ಪ್ರದೇಶದಲ್ಲಿ ತಡೆಗೋಡೆ ಕುಸಿತ

ಕಿನ್ನಿಗೋಳಿ: ಕಿನ್ನಿಗೋಳಿ ಬಳಿಯ ತೋಕೂರು ಗ್ರಾಮದ ತಾಳಗುರಿ ಪ್ರದೇಶದ ಮೂರು ಮನೆಗಳು ಕುಸಿಯುವ ಭೀತಿಯಲ್ಲಿರುವುದರಿಂದ ಆ ಮನೆಗಳ ನಿವಾಸಿಗಳನ್ನು ಸ್ಥಳೀಯವಾಗಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಮಂಗಳವಾರ ರಾತ್ರಿಯಿಡೀ ಸುರಿದ ಮಳೆಯಿಂದ ಹಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕೆಲವು ಕಡೆಗಳಲ್ಲಿ ರವಾನಿಸಿದ ಘಟನೆ ಬೆಳಕಿಗೆ ಬಂದಿದೆ.
ವರ್ಷದ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ಹರೀಶ್ ಕರ್ಕೇರಾ, ಪ್ರದೀಪ್ ಮೆನನ್, ಜ್ಯೂಲಿಯಾನಾ ಕ್ಯಾಸ್ಟಲ್ ಅವರ ಮನೆಗಳು ಅಪಾಯಕ್ಕೆ ಸಿಲುಕಿದೆ. ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದು, ಇದರಿಂದ ಮೂರೂ ಮನೆಗಳ ಶೌಚಾಲಯ ಗುಂಡಿಗಳು ಮಣ್ಣಿನೊಂದಿಗೆ ಸೇರಿಕೊಂಡಿದೆ. ಮನೆಯ ಗೋಡೆಗಳಲ್ಲಿಯೂ ಬಿರುಕು ಬಿಟ್ಟಿದೆ. ಗುಡ್ಡೆಯಂತಿರುವ ಈ ಪ್ರದೇಶದಲ್ಲಿ ಕೆಳಗಿನ ಪ್ರದೇಶದ ಜಮೀನು ಮಾಲೀಕರು ಮಣ್ಣನ್ನು ತೆಗೆದಿದ್ದು ಇದರಿಂದಲೇ ಈ ರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಲ್ಲುಗಳಿಂದ ಕಟ್ಟಿದ್ದ ತಡೆಗೋಡೆಯು ಬಲ ಕಳೆದುಕೊಂಡು ಮಳೆ ನೀರಿಗೆ ಕೆಳಗುರುಳಿದೆ ಎಂದಿದ್ದಾರೆ. ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿದ್ದು ಮಳೆ ನಿಂತ ಮೇಲೆ ತಡೆಗೋಡೆಯ ಕಾಮಗಾರಿ ನಡೆಸುವ ಸಾಧ್ಯತೆ ಇದೆ.
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಸದಸ್ಯರು, ತಹಶೀಲ್ದಾರ್ ಮಾಣಿಕ್ಯ, ಕಂದಾಯ ಇಲಾಖೆಯ ದಿಲೀಪ್ ರೋಡ್‌ಕರ್, ಮೋಹನ್, ಪಿಡಿಒ ಅನಿತಾ ಕ್ಯಾಥರಿನ್, ಗೃಹರಕ್ಷಕದಳದ ಮಾಜಿ ಕಾಮಾಂಡೆರ್ ಮನ್ಸೂರ್ ಎಚ್., ಭೇಟಿ ನೀಡಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ಶಿಫ್ಟ್
ಮೂರು ಮನೆಗಳು ಅಪಾಯಕ್ಕೆ ಸಿಲುಕಿರುವುದರಿಂದ ಇಲ್ಲಿನ ನಿವಾಸಿಗಳ ಮನವೊಲಿಸಿ ಅವರನ್ನು ಸ್ಥಳೀಯ ಮನೆಗಳಿಗೆ ಶಿಫ್ಟ್ ಮಾಡಲಾಗಿದೆ. ಮೂರು ಮನೆಗಳಲ್ಲೂ ಅಮೂಲ್ಯವಾದ ವಸ್ತುಗಳಿದೆ ಅದನ್ನು ತತ್‌ಕ್ಷಣ ತೆಗೆಯಲು ಸಾಧ್ಯವಿಲ್ಲ. ಮಳೆ ನಿಲ್ಲುವ ಲಕ್ಷಣ ಇದೆ. ಆದರೂ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಮನೆಗಳು ಬೀಳುವುದನ್ನು ನಿಲ್ಲಿಸಲಾಗುವುದಿಲ್ಲ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ.

ಮೋಹನ್
ಗ್ರಾಮ ಕರಣಿಕ, ಪಡುಪಣಂಬೂರು ಗ್ರಾಮ ಪಂಚಾಯಿತಿ.

Kinigoli-31051807

Comments

comments

Comments are closed.

Read previous post:
Kinigoli-31051806
ನೀಫಾ ವೈರಾಣು ಜಾಗೃತಿ ಕರಪತ್ರ ವಿತರಣೆ

ಕಿನ್ನಿಗೋಳಿ : ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕಮಂಡಲ, ಶ್ರೀ ವಿದ್ಯಾವಿನಾಯಕ ರಜತಾಸೇವಾ ಟ್ರಸ್ಟ್, ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಲವು ಜಂಟಿಯಾಗಿ ಮಂಗಳೂರಿನ ನೆಹರು ಯುವ ಕೇಂದ್ರದ ಸಹಕಾರದಲ್ಲಿ ಜಿಲ್ಲಾ...

Close