ಅಲೆಕ್ಸಾಂಡರ್ ಮಿನೇಜಸ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಪ್ರತಿ ಪಾಠದಲ್ಲೂ ಸಾಮಾಜಿಕ ಪ್ರಜ್ಞೆಯ ಮಾತುಗಳ ಮೂಲಕ ಶಿಸ್ತು, ಶಿಕ್ಷಣದ ಬಗ್ಗೆ ಕಾಳಜಿ ಮಾನವೀಯ ಮೌಲ್ಯಗಳನ್ನು ತಳಿ ಹೇಳಿ ಶಿಕ್ಷಣದ ಬಗ್ಗೆ ಹುರಿದುಂಬಿಸಿದ ನೀಡಿ ಮಹಾನ್ ಚೇತನ ಅಲೆಕ್ಸಾಂಡರ್ ಮಿನೇಜಸ್ ಎಂದು ನಿವೃತ್ತ ಶಿಕ್ಷಕ ವೆಲೇರಿಯನ್ ಸಿಕ್ವೇರಾ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪೊಂಪೈ ಪ್ರೌಢ ಶಾಲಾ ನಿವೃತ್ತ ಶಿಕ್ಷಕ ಅಲೆಕ್ಸಾಂಡರ್ ಮಿನೇಜಸ್ ಅವರ ನಿಧನದ ಹಿನ್ನೆಲೆ ಅವರ ಶಿಷ್ಯವೃಂದ ಶನಿವಾರ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಹಿರಿಯ ಸಾಹಿತಿ ಕೆ ಗಣೇಶ್ ಮಲ್ಯ, ಪೊಂಪೈ ಪದವಿ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರೆನ್ಸ್ ಮಿರಾಂದ, ನಿವೃತ್ತ ಶಿಕ್ಷಕ ಅನಂತರಾಮ ಭಟ್, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಯಶವಂತ ರಾವ್, ರಾಬರ್ಟ್ ರೋಸಾರಿಯೋ, ರಘುವೀರ ಕಾಮತ್, ರವಿದಾಸ್ ಶೆಣೈ, ಶರತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-0305201804

Comments

comments

Comments are closed.

Read previous post:
Kinnigoli-0305201803
ಉಲ್ಲಂಜೆ ಶಾಲೆ : ಪುಸ್ತಕ ವಿತರಣೆ

ಕಿನ್ನಿಗೋಳಿ: ಉಲ್ಲಂಜೆ ದ.ಕ.ಜಿ.ಪಂ ಶಾಲೆಯಲ್ಲಿ ರಾಜರತ್ನಪುರ ವೀರಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ಶಾಲೆಯ ಎಲ್ಲ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಈಶ್ವರ ಕಟೀಲ್,...

Close