ಶಿಕ್ಷಣದ ಮೂಲಕ ಜಾಗೃತಿ ಮೂಡಿಸೋಣ

ಕಿನ್ನಿಗೋಳಿ: ಸಧೃಡ ಸಮಾಜ ಕಟ್ಟುವಲ್ಲಿ ಶಿಕ್ಷಣದ ಮೂಲಕ ಜಾಗೃತಿ ಮೂಡಿಸೋಣ. ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ಕೆ ಪರಸ್ಪರ ಕೈ ಜೋಡಿಸಿ ಸನ್ಮಾರ್ಗದತ್ತ ಸಾಗೋಣ ಎಂದು ಡಾ. ನಂದಿನಿ ಹೇಳಿದರು.
ಹಳೆಯಂಗಡಿ ಹರಿಓಂ ಸಭಾಂಗಣದಲ್ಲಿ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿಯ ಜಂಟಿ ಸಂಯೋಜನೆಯಲ್ಲಿ ನಡೆದ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕಾಂತಾವರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ಯಾಮಲ ಕುಮಾರಿ ಉಪನ್ಯಾಸ ನೀಡಿದರು. ಉದ್ಯಮಿ ವಿಶ್ವನಾಥ ಕೋಟ್ಯಾನ್ ಅವರು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆ ವಹಿಸಿದ್ದರು.
ಗೋಳಿದಡಿ ದಿ.ರಾಮ ಪೂಜಾರಿ ಮತ್ತು ದಿ.ರಾಧಾ ಪೂಜಾರಿ ಅವರ ಸ್ಮರಣಾರ್ಥ ೨೦ನೇ ವರ್ಷದ ಉಚಿತ ಪುಸ್ತಕವನ್ನು ಹಳೆಯಂಗಡಿಯ ಆಸುಪಾಸಿನ ಪ್ರಾಥಮಿಕ ಶಾಲೆಯ ಮಕ್ಕಳಿಗೆ 33 ಸಾವಿರ ರೂ. ವೆಚ್ಚದಲ್ಲಿ ೮೨ ಮಕ್ಕಳಿಗೆ ವಿತರಿಸಲಾಯಿತು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ, ಸಲಹೆಗಾರ ಲಕ್ಷ್ಮಣ್ ಸಾಲ್ಯಾನ್, ಸಮಾಜ ಸೇವಕ ಜೈಕೃಷ್ಣ ಬಿ. ಕೋಟ್ಯಾನ್, ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್.ಸುವರ್ಣ, ಯುವವಾಹಿನಿ ಅಧ್ಯಕ್ಷ ಶರತ್‌ಕುಮಾರ್, ನಿಯೋಜಿತ ಅಧ್ಯಕ್ಷ ಹೇಮನಾಥ್ ಬಿ.ಕರ್ಕೇರ, ಕಾರ್ಯದರ್ಶಿ ಚಂದ್ರಿಕಾ ಪ್ರವೀಣ್ ಕೋಟ್ಯಾನ್, ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್, ಸಹ ಕಾರ್ಯದರ್ಶಿ ದೀಪಕ್ ನಾನಿಲ್, ಕೋಶಾಕಾರಿ ರಮೇಶ್ ಬಂಗೇರ, ಸಂಘದ ಕಾರ್ಯದರ್ಶಿ ಹಿಮಕರ ಸುವರ್ಣ ಕದಿಕೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-0305201806

Comments

comments

Comments are closed.

Read previous post:
Kinnigoli-0305201805
ತೋಕೂರು ಕುಲಾಲ ಸಂಘದ ಮಹಾ ಸಭೆ

ಕಿನ್ನಿಗೋಳಿ: ಸಮಾಜಕ್ಕೆ ಉತ್ತಮ ಸೇವೆ ಹಗೂ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ. ಸಂಘಟನಾ ಶಕ್ತಿಯಿಂದ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಮುಂಬಯಿ ಕುಲಾಲ ಸಂಘದ ಉಪಾಧ್ಯಕ್ಷ ರಘು...

Close