ತೋಕೂರು ಕುಲಾಲ ಸಂಘದ ಮಹಾ ಸಭೆ

ಕಿನ್ನಿಗೋಳಿ: ಸಮಾಜಕ್ಕೆ ಉತ್ತಮ ಸೇವೆ ಹಗೂ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ. ಸಂಘಟನಾ ಶಕ್ತಿಯಿಂದ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಮುಂಬಯಿ ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಹೇಳಿದರು.
ಎಸ್‌ಕೋಡಿಯ ಕುಲಾಲ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ ತೋಕೂರು ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ನಿವೃತ್ತ ಶಿಕ್ಷಕ ಮಂಜಪ್ಪ ಮೂಲ್ಯ ಹಾಗೂ ಸುಜಾತ ಮೂಲ್ಯ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸಂಘದ ಅಧ್ಯಕ್ಷೆ ಲೀಲಾ ಬಂಜನ್ ಅಧ್ಯಕ್ಷತೆ ವಹಿಸಿದ್ದರು.
ಮುಂಬಯಿ ಕುಲಾಲ ಸಂಘದ ಸುರೇಶ್ ಬಂಜನ್, ಸಂಘದ ಉಪಾಧ್ಯಕ್ಷ ಯೋಗೀಶ್ ಮೂಲ್ಯ, ಗೌರವಾಧ್ಯಕ್ಷ ಶ್ರೀಧರ ಬಂಗೇರ, ಸುಂದರ ಸಾಲ್ಯಾನ್ , ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಉಪಸ್ಥಿತರಿದ್ದರು. ಕಮಲಾಕ್ಷಿ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ವರದಿ ವಾಚಿಸಿದರು. ಕೋಶಾಕಾರಿ ರೇವತಿ ಪುರುಷೋತ್ತಮ್ ವಂದಿಸಿದರು. ಲಕ್ಷ್ಮಣ ಬಿ. ಬಿ. ಏಳಿಂಜೆ ಕಾರ್ಯಕ್ರಮ ನಿರೂಪಿಸಿದರು.

Kinnigoli-0305201805

Comments

comments

Comments are closed.

Read previous post:
Kinnigoli-0305201804
ಅಲೆಕ್ಸಾಂಡರ್ ಮಿನೇಜಸ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಪ್ರತಿ ಪಾಠದಲ್ಲೂ ಸಾಮಾಜಿಕ ಪ್ರಜ್ಞೆಯ ಮಾತುಗಳ ಮೂಲಕ ಶಿಸ್ತು, ಶಿಕ್ಷಣದ ಬಗ್ಗೆ ಕಾಳಜಿ ಮಾನವೀಯ ಮೌಲ್ಯಗಳನ್ನು ತಳಿ ಹೇಳಿ ಶಿಕ್ಷಣದ ಬಗ್ಗೆ ಹುರಿದುಂಬಿಸಿದ ನೀಡಿ ಮಹಾನ್ ಚೇತನ...

Close