ವಿದ್ಯೆ ವಿನಯವನ್ನು ಕಲಿಸುತ್ತದೆ

ಮೂಲ್ಕಿ: ನಾವು ಕಲಿತಂತಹ ವಿದ್ಯೆಯು ವಿನಯನ್ನು ಕಲಿಸುತ್ತದೆ, ನಮ್ಮಲ್ಲಿನ ಆತ್ಮ ಶಕ್ತಿಯನ್ನು ಶಿಕ್ಷಣದಿಂದ ನಿರ್ದಿಷ್ಟ ಗುರಿಯನ್ನು ಮುಟ್ಟಬಹುದು, ಧಾರ್ಮಿಕ ಕ್ಷೇತ್ರವೊಂದು ಜಾತಿ ಮತ ಭೇದವಿಲ್ಲದೇ ಶಿಕ್ಷಣಕ್ಕೆ ನೀಡುವ ನೆರವು ಮಾದರಿಯಾಗಿದೆ ಎಂದು ಜನಪದ ಚಿಂತಕ ದಯಾನಂದ ಕತ್ತಲ್‌ಸಾರ್ ಹೇಳಿದರು.
ಅವರು ಮೂಲ್ಕಿ ಬಳಿಯ ಪಡುಪಣಂಬೂರು, ಪಡುತೋಟದ ಶ್ರಿ ಧರ್ಮದೈವ ಜಾರಂದಾಯ ದೈವಸ್ಥಾನದಲ್ಲಿ ಭಾನುವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿ, ಶಿಕ್ಷಣ ಪಡೆಯುವ ಅಂದಿನ ಕಾಲದಲ್ಲಿ ಶಿಸ್ತಿದ್ದರೂ ಶಿಕ್ಷಣಕ್ಕೆ ಬಹಳ ಪ್ರೋತ್ಸಾಹ ಕಡಿಮೆ ಆದರೆ ಇಂದು ಪ್ರೋತ್ಸಾಹ ಇದ್ದರೂ ಶಿಸ್ತಿನ ಶಿಕ್ಷಣ ಪಡೆಯುವ ವ್ಯವದಾನ ಮಕ್ಕಳಲ್ಲಿ ಇರುವುದಿಲ್ಲ ಇದನ್ನು ಮೊದಲು ಕಲಿಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ವಿವಿಧ ೧೧ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಾದ ರಕ್ಷಿತಾ ಮತ್ತು ಪ್ರದೀಪ್ತ ಆರ್. ಜೈನ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ದೆಹಲಿಯ ಉದ್ಯಮಿ ಡಿ.ಡಿ.ರಾವ್, ಶಿಕ್ಷಣ ತಜ್ಞ ವಿದ್ಯಾಧರ್ ಶೆಟ್ಟಿ ಕೊಲ್ನಾಡುಗುತ್ತು, ಪಡುಪಣಂಬೂರು ಸುವರ್ಣ ಮೂಲಸ್ಥಾನದ ಅಧ್ಯಕ್ಷ ಸುಚೇಂದ್ರ ಅಮೀನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಸಾಹುಲ್ ಹಮೀದ್ ಕದಿಕೆ, ದೈವಸ್ಥಾನದ ಅರ್ಚಕ ಸತೀಶ್ ಭಟ್, ಮಕ್ಕಳ ಪೋಷಕರಾದ ರಾಜೇಂದ್ರ ಜೈನ್, ಲತಾ ಆರ್. ಜೈನ್, ಶಕುಂತಲಾ ಭಾಸ್ಕರ ಬಂಗೇರ, ದೈವಸ್ಥಾನದ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಜಿ., ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಎಡ್ಮೆಮಾರ್, ಕೋಶಾಧಿಕಾರಿ ಕೃಷ್ಣಮೂರ್ತಿ ಹೆಬ್ಬಾರ್ ಇದ್ದರು.

Mulki-10061801

Comments

comments

Comments are closed.

Read previous post:
Kinnigoli-0505201806
ಡಾ. ಎಂ. ರಾ. ಶೆಟ್ಟಿ – ಸಿಬಿಎಸ್‌ಇ ಸಾಧಕರು

ಕಿನ್ನಿಗೋಳಿ : ತೋಕೂರು ನಿಟ್ಟೆ ವಿದ್ಯಾ ಸಂಸ್ಥೆಗೆ ಒಳಪಟ್ಟ ಡಾ. ಎಂ ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಸಕ್ತ ಸಾಲಿನ 10ನೇ ತರಗತಿಯ ಸಿ ಬಿ...

Close