ಹಳೆಯಂಗಡಿ: ದತ್ತಿ ಬಹುಮಾನ ಪ್ರದಾನ

ಕಿನ್ನಿಗೋಳಿ: ಸಮಾಜ ಮುಖಿ ಚಿಂತನೆಗಳಾದ ಶಿಕ್ಷಣ, ಸಾಮಾಜಿಕ ಚಟುವಟಿಕೆ ಹಾಗೂ ಸಾಂಸ್ಕೃತಿಕತೆ ಸಾರುವ ಸೇವಾ ಸಂಸ್ಥೆಗಳಿಗೆ ಉತ್ತಮ ಭವಿಷ್ಯವಿದೆ. ಅಂತಹ ಸೇವಾ ಸಂಸ್ಥೆಗಳಿಗೆ ಜನರು ಪ್ರೋತ್ಸಾಹ ನೀಡುತ್ತಾರೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಳೆಯಂಗಡಿ ರಾಮಾನುಗ್ರಹದಲ್ಲಿ ಶನಿವಾರ ನಡೆದ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲದ ಜಂಟಿ ವಾರ್ಷಿಕೋತ್ಸವ ಮತ್ತು ಎಚ್. ನಾರಾಯಣ ಸನಿಲ್ ದತ್ತಿ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸುರತ್ಕಲ್‌ನ ಉದ್ಯಮಿ ಪುಂಡಲೀಕ ಹೊಸಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾವಂತ ವಿದ್ಯಾಥಿಗಳಾದ ಶ್ರೀಪದ ಶೆಣೈ ಹಳೆಯಂಗಡಿ, ಶ್ರೀಪದ ಭಟ್ ಚೆಳ್ಯಾರು, ಪೂಜಾಶ್ರೀ ತೋಕೂರು, ಲಾವಣ್ಯ ಸುವರ್ಣ ಸಾಗ್, ಚಂದನಾ ಪಡುಪಣಂಬೂರು ಅವರಿಗೆ ದಿ. ಎಚ್.ನಾರಾಯಣ ಸನಿಲ್ ದತ್ತಿ ಬಹುಮಾನ ನೀಡಲಾಯಿತು.
ಉಪನ್ಯಾಸಕ ವಿದ್ವಾನ್ ರಘುಪತಿ ಭಟ್ ಸಸಿಹಿತ್ಲು ಅವರು ದತ್ತಿ ಉಪನ್ಯಾಸವನ್ನು ನೀಡಿದರು.
ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಧೀರಜ್ ಡಿ. ಆಚಾರ್ಯ, ವಿಶ್ರುತ್ ಆರ್. ಶೆಟ್ಟಿ, ಅಮಿಷ್ ಎಸ್. ಶೆಟ್ಟಿ, ಲಿಖಿತ್ ಎನ್. ಕೋಟ್ಯಾನ್, ಶ್ರವಣ್ ಎಸ್. ದೇವಾಡಿಗ ಅವರನ್ನು ಗೌರವಿಸಲಾಯಿತು.
ದಿ. ವಾರಿಜ ವಾಸುದೇವ ಆಚಾರ್ಯ ಸ್ಮರಣಾರ್ಥ ಉಚಿತ ಪುಸ್ತಕವನ್ನು ಹಳೆಯಂಗಡಿ ಯುಬಿಎಂಸಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ತಾಲೂಕಿನ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ವಿಜೇತ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಮತ್ತು ಕಾರ್ಯದರ್ಶಿ ಸಂತೋಷ್ ದೇವಾಡಿಗ ಅವರನ್ನು ಗೌರವಿಸಲಾಯಿತು.
ದಿ. ಮಾಧವ ಶೆಣೈ ಹಳೆಯಂಗಡಿ ಅವರ ಸ್ಮರಣಾರ್ಥ ಮೇಘರಾಜ್, ಲಾವಣ್ಯ ಸುವರ್ಣ, ನಿತೇಶ್, ರಮ್ಯ ಕರ್ಕೇರ, ಕೀರ್ತನ್‌ರಿಗೆ ವಿದ್ಯಾ ನಿಧಿ, ದಿ. ಸೀತಾರಾಮ ದೇವಾಡಿಗ ಮತ್ತು ದಿ.ದೇವದಾಸ್ ಕಾಮತ್ ಅವರ ಸ್ಮರಣಾರ್ಥ ನೀಡುವ ಸಮಗ್ರ ಕ್ರೀಯಾಶೀಲ ವಿದ್ಯಾರ್ಥಿ ಪುರಸ್ಕಾರವನ್ನು ನಮಿತಾ ಅವರಿಗೆ ನೀಡಲಾಯಿತು. ಮಕ್ಕಳಿಗೆ ನಡೆಸಿ ವಿವಿಧ ಆಟೋಟ ಸ್ಪರ್ಧೆಯನ್ನು ಅತಿಥಿಗಳು ವಿತರಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಬಾರ್ಕೂರು ಕಚ್ಚೂರು ದೇವಳದ ಮಾಜಿ ಆಡಳಿತ ಮೊಕ್ತೇಸರ ದಿನೇಶ್‌ಕುಮಾರ್ ಹಳೆಯಂಗಡಿ, ಉದ್ಯಮಿ ಪ್ರವೀಣ್‌ಕುಮಾರ್ ಬೊಳ್ಳೂರು, ಯುಬಿಎಂಸಿ ಶಾಲೆಯ ಮುಖ್ಯ ಶಿಕ್ಷಕಿ ಐರಿನ್ ಕ್ರಿಸ್ತಬೆಲ್, ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಅಧ್ಯಕ್ಷ ಪ್ರಕಾಶ್ ಎನ್. ಶೆಟ್ಟಿ, ರಜತ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಸೂರ್ಯಕುಮಾರ್, ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ಮಹಿಳಾ ಮಂಡಳದ ಅಧ್ಯಕ್ಷೆ ಸುಜಾತಾ ಸದಾನಂದ, ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರೀ ಕೋಟ್ಯಾನ್ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಸುಧಾಕರ್ ಆರ್. ಅಮೀನ್ ಸ್ವಾಗತಿಸಿದರು, ನವೀನ್‌ಕುಮಾರ್ ಶೆಟ್ಟಿ ಎಡ್ಮೆಮಾರ್, ಚಂದ್ರಶೇಖರ್ ಜಿ., ಯೋಗೀಶ್ ಪಾವಂಜೆ, ರಾಜೇಶ್ವರೀ, ಸ್ಟ್ಯಾನಿ ಡಿಕೋಸ್ತ, ಎಚ್.ರಾಮಚಂದ್ರ ಶೆಣೈ, ಮೋಹನ್ ಅಮೀನ್, ಯಶವಂತಿ ಶೆಣೈ ಪರಿಚಯಿಸಿದರು. ಕಾರ್ಯದರ್ಶಿ ನಾಗೇಶ್ ಬಿ.ಜಿ. ವರದಿ ನೀಡಿದರು, ಕೋಶಾಧಿಕಾರಿ ಯತೀಶ್ ಕೋಟ್ಯಾನ್ ವಂದಿಸಿದರು, ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

 

Kinnigoli-11061802

Comments

comments

Comments are closed.

Read previous post:
Kinnigoli-11061801
ಪಕ್ಷಿಕೆರೆ: ಶಾಲಾ ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂದರ ಯಾತಿಕ ಕೇಂದ್ರದ ಆಶ್ರಯದಲ್ಲಿ ನೂತನ ಆಂಗ್ಲ ಮಾಧ್ಯಮ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪಕ್ಷಿಕೆರೆ ಸಂತ ಜೂದರ...

Close