ಕಿನ್ನಿಗೋಳಿ ರೋಟರಿ : ಅಧ್ಯಕ್ಷರ ಸಂಜೆ

ಕಿನ್ನಿಗೋಳಿ: ಸಾರ್ಥಕ ಜೀವನ ಕಂಡುಕೊಳ್ಳಲು ಸಮಾಜ ಸೇವೆ ಅತ್ಯುತ್ತಮ ಮಾರ್ಗವಾಗಿದೆ. ಸಹಾಯ ಪ್ರವೃತ್ತಿಯ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ರೋಟರಿ 3181 ರ ವಲಯ 1ರ ಸಹಾಯಕ ಗವರ್ನರ್ ಜೊಸ್ಸಿ ಎಡ್ವಿನ್ ಪಿಂಟೊ ಹೇಳಿದರು.
ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಶನಿವಾರ ನಡೆದ ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷರ ಸಂಜೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷೆ ಸೆವರಿನ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕಾರ್ಯದರ್ಶಿ ಸಂತೋಷ್‌ಕುಮಾರ್, ನಿಯೋಜಿತ ವಲಯ ಸೇನಾನಿ ಜೆರಾಲ್ಡ್ ಮಿನೇಜಸ್, ನಿಯೋಜಿತ ಅಧ್ಯಕ್ಷ ಕೆ.ಬಿ. ಸುರೇಶ್, ನಿಕಟ ಪೂರ್ವ ಅಧ್ಯಕ್ಷ ರಮಾನಂದ ಪೂಜಾರಿ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-11061801

Comments

comments

Comments are closed.

Read previous post:
Kinnigoli-11061802
ಹಳೆಯಂಗಡಿ: ದತ್ತಿ ಬಹುಮಾನ ಪ್ರದಾನ

ಕಿನ್ನಿಗೋಳಿ: ಸಮಾಜ ಮುಖಿ ಚಿಂತನೆಗಳಾದ ಶಿಕ್ಷಣ, ಸಾಮಾಜಿಕ ಚಟುವಟಿಕೆ ಹಾಗೂ ಸಾಂಸ್ಕೃತಿಕತೆ ಸಾರುವ ಸೇವಾ ಸಂಸ್ಥೆಗಳಿಗೆ ಉತ್ತಮ ಭವಿಷ್ಯವಿದೆ. ಅಂತಹ ಸೇವಾ ಸಂಸ್ಥೆಗಳಿಗೆ ಜನರು ಪ್ರೋತ್ಸಾಹ ನೀಡುತ್ತಾರೆ ಎಂದು...

Close