ಬಿಲ್ಲವ: ಯುವ ನಾಯಕತ್ವ ಬೆಳವಣಿಗೆ ತರಬೇತಿ

ಮೂಲ್ಕಿ: ಯುವ ಜೀವನದಲ್ಲಿ ಬರುವ ಆಕರ್ಶಣೆಗಳಿಂದ ಹತ್ತಿರವಾಗುವ ದುಶ್ಚಟಗಳು ನಮ್ಮ ಜೀವನೋತ್ಸಾಹವನ್ನೇ ಕುಂಠಿತಗೊಳಿಸುತ್ತದೆ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಹ ಕಾರ್ಯದರ್ಶಿ ಗಂಗಾಧರ ಪೂಜಾರಿ ಹೇಳಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವತಿಯಿಂದ ಯುವ ವಿದ್ಯಾರ್ಥಿಗಳಿಗಾಗಿ ಭಾನುವಾರ ನಡೆದ ಜೀವನೋತ್ಸವ-2018 ವ್ಯಕ್ತಿತ್ವ ವಿಕಸನ ಜೀವನ ಕೌಶಲ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ಹತ್ತಿರವಾಗದೆ ಪ್ರಾಪಂಚಿಕ ಜ್ಞಾನ ಸಂಪನ್ನರಾಗಿ ನಾಯಕತ್ವ ಗುಣಗಳಿಂದ ಸಮಾಜವನ್ನು ಮುನ್ನಡೆಸುವ ವ್ಯಕ್ತಿಗಳಾಗಿ ಬೆಳೆಯಬೇಕು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲವೂ ಯುವ ನಾಯಕತ್ವದ ಬೆಳವಣಿಗೆಗಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭ ಜೇಸಿಐ ತರಬೇತುದಾರ ಸುಧಾಕರ ಕಾರ್ಕಳ ಹಾಗೂ ರಾಮಕೃಷ್ಣ ಪೂಂಜಾ ಐಟಿಐ ಶಿಕ್ಷಕ ಹರಿ ಎಚ್ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ವಹಿಸಿದ್ದರು.
ಅತಿಥಿಗಳಾಗಿ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು, ಕೋಶಾಧಿಕಾರಿ ಶ್ರೀನಿವಾಸ್ ಅಮೀನ್,ಸೇವಾದಳದ ದಳಪತಿ ಉಮೇಶ್ ಮಾನಂಪಾಡಿ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಗೋಪೀನಾಥ ಪಡಂಗ ಸ್ವಾಗತಿಸಿದರು,ವಿಜಯ ಕುಮಾರ್ ಕುಬೆವೂರು ನಿರೂಪಿಸಿ ವಂದಿಸಿದರು.

Mulki-11061801

Comments

comments

Comments are closed.

Read previous post:
Kinnigoli-11061802
ವಿಶ್ವಕರ್ಮ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಇದರ ವಿಶ್ವಕರ್ಮ ಭಜನಾ ಮಂಡಳಿಯ ವತಿಯಿಂದ ಸೂರ‍್ಯೋದಯದಿಂದ ಸೂರ‍್ಯಾಸ್ತಮಾನದವರೆಗೆ ಭಾನುವಾರ ನಡೆದ ಭಜನಾ ಮಂಗಲೋತ್ಸವವನ್ನು ಸುರಗಿರಿ ದೇವಳ...

Close