ನಾನು ಜನರ ಸೇವಕ : ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ : ನಾನು ಶಾಸಕನಲ್ಲ ಬದಲಾಗಿ ಜನರ ನಡುವೆ ನಿಂತು ಕೆಲಸ ಮಾಡಲು ಬಯಸುವ ಜನಸೇವಕವಾಗಿರಲು ಬಯಸಿದ್ದೇನೆ. ಮೂಲ್ಕಿ ಮೂಡಬಿದಿರೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುವ ಸಂಕಲ್ಪದಿಂದಲೇ ಶಾಸಕನಾಗಿ ತನ್ನ ಮೊದಲ ಪ್ರಾಶಸ್ತ್ಯವನ್ನು ಕಾರ್ಯಕರ್ತರಿಗೆ ಮೀಸಲಿರಿಸಿದ್ದೇನೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಸಸಿಹಿತ್ಲು ಬಿಜೆಪಿ ವತಿಯಿಂದ ದಿವ್ಯಾಮೃತ ಸಭಾಭವನದಲ್ಲಿ ಭಾನುವಾರ ನಡೆದ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶುಭ ಸಂದರ್ಭದಲ್ಲಿ ಸಾರ್ವಜನಿಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಶ್ರೀ ಸಸಿಹಿತ್ಲು ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ ಆಶೀರ್ವಚನ ನೀಡಿದರು.
ಬಿಜೆಪಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಕಿನ್ನಿಗೊಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ, ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು, ಬೂತ್ ಸಮಿತಿಯ ಅಧ್ಯಕ್ಷರಾದ ಸೂರ್ಯ ಕಾಂಚನ್, ಆನಂದ ಸುವರ್ಣ, ಧನರಾಜ್ ಕೋಟ್ಯಾನ್ ಉಪಸ್ಥಿತರಿದ್ದರು.
ಕ್ಷೇತ್ರದ ಮೀನುಗಾರಿಕಾ ಪ್ರಕೋಷ್ಠದ ಸಂಚಾಲಕ ಅನಿಲ್ ಕುಂದರ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಶೋಭೇಂದ್ರ ಸಸಿಹಿತ್ಲು ಪ್ರಸ್ತಾವನೆಗೈದರು. ಸಸಿಹಿತ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ವಾಮನ ಇಡ್ಯಾ ಪರಿಚಯಿಸಿದರು. ಯತೀಶ್‌ಕುಮಾರ್ ಸಸಿಹಿತ್ಲು ಪ್ರದೇಶದ ಮನವಿ ವಾಚಿಸಿದರು, ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಶೋಕ್ ಬಂಗೇರ ವಂದಿಸಿದರು, ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್ ನಿರೂಪಿಸಿದರು.
ಶಾಸಕರನ್ನು ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಗೌರವಿಸಿದರು.

Kinnigoli-11061801

Comments

comments

Comments are closed.

Read previous post:
Kinnigoli-11061808
ಪಕ್ಷಿಕೆರೆ : ಚರ್ಚ್ ಧರ್ಮಗುರುಗಳಿಗೆ ಸನ್ಮಾನ

ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂದರ ಚರ್ಚ್ ಧರ್ಮಗುರುಗಳಾದ ಫಾ. ಆಂಡ್ರ್ಯೂ ಲಿಯೋ ಡಿಸೋಜ ಹಾಗೂ ಸಹಾಯಕ ಧರ್ಮಗುರು ಫಾ. ಕ್ಲಿಫರ್ಡ್ ಪಿಂಟೊ ವರ್ಗವಾಗಿ ನಿರ್ಗಮಿಸುವ ಸಂದರ್ಭ...

Close