ಪಕ್ಷಿಕೆರೆ : ಚರ್ಚ್ ಧರ್ಮಗುರುಗಳಿಗೆ ಸನ್ಮಾನ

ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂದರ ಚರ್ಚ್ ಧರ್ಮಗುರುಗಳಾದ ಫಾ. ಆಂಡ್ರ್ಯೂ ಲಿಯೋ ಡಿಸೋಜ ಹಾಗೂ ಸಹಾಯಕ ಧರ್ಮಗುರು ಫಾ. ಕ್ಲಿಫರ್ಡ್ ಪಿಂಟೊ ವರ್ಗವಾಗಿ ನಿರ್ಗಮಿಸುವ ಸಂದರ್ಭ ಪಕ್ಷಿಕೆರೆ ನಾಗರಿಕರ ವತಿಯಿಂದ ಪಕ್ಷಿಕೆರೆ ಸಂತ ಜೂದರ ಸಭಾಭವನದಲ್ಲಿ ಪೌರ ಸನ್ಮಾನ ನಡೆಯಿತು. ಈ ಸಂದರ್ಭ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಪಕ್ಷಿಕೆರೆ ನೂತನ ಧರ್ಮಗುರು ಫಾ. ಮೆಲ್ವಿನ್ ನೊರೊನ್ಹಾ, ಅಮ್ಮೆಂಬಳ ಚರ್ಚ್ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನ್ಹಸ್, ಪುನರೂರು ಜುಮ್ಮ ಮಸೀದಿ ಖತೀಬ್ ಹಾಗೂ ಎಸ್.ಎಸ್.ಎಫ್.ಉಡುಪಿ ಜಿಲ್ಲಾ ಕಮಿಟಿ ಅಧ್ಯಕ್ಷ ಪಿ. ಯಮ್. ಎ. ಮಹಮ್ಮದ್ ಅಶ್ರಫ್ ರಝಾ ಅಂಜಾದಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಕ್ಷಿಕೆರೆ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಪಡುಪಣಂಬೂರು ಗ್ರಾi ಪಂಚಾಯಿತಿ ಅಧ್ಯಕ್ಷ ಮೊಹನ್‌ದಾಸ್, ನೂತನ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಮರಿಯಮ್ಮ, ಕನ್ನಡ ಮಾದ್ಯಮ ಶಾಲಾ ಮುಖ್ಯ ಶಿಕ್ಷಕಿ ಜೊಸ್ಪಿನ್ ಬಾರ್ನೆಸ್, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜಾಕ್ಸನ್ ಪಕ್ಷಿಕೆರೆ, ಕಾರ್ಯದರ್ಶಿ ಕ್ಯಾರಲ್, ಪಡುಪಣಂಬೂರು ಪಿಡಿಒ ಕ್ಯಾಥರಿನ್, ಕೆಮ್ರಾಲ್ ಪಿಡಿಒ ರಮೇಶ್ ರಾಥೊಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11061808

Comments

comments

Comments are closed.

Read previous post:
Kinnigoli-11061807
ತೋಕೂರು : ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಂಘ ಸಂಸ್ಥೆಗಳು ಮುನ್ನಡೆದಾಗ ಯಶ್ಸಸು ಸಾದ್ಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ತೋಕೂರು ಕುಲಾಲ ಸಮಾಜ ಸೇವಾ...

Close