ಪುನರೂರು: ಯುವಕ ಮಂಡಲ ಪುಸ್ತಕ ವಿತರಣೆ

ಕಿನ್ನಿಗೋಳಿ : ತಾಳಿಪಾಡಿ ಪುನರೂರು ಶ್ರೀ ವೀರಭದ್ರ ಯುವಕ ಮಂಡಲ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ 26 ನೇ ವರ್ಷದ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನವನ್ನು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ವಿತರಿಸಿದರು. ಸುಮಾರು ೩೦೦ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ನಿವೇದಿತಾ ಶೆಟ್ಟಿಗಾರ್ ಅವರಿಗೆ ಶಿಕ್ಷಣದ ವೆಚ್ಚ ಹಾಗೂ ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿ ರಿಜ್ವಾನ್ ಅಹಮ್ಮದ್, ವೀರಭದ್ರ ಕಲಾ ಬಳಗದ ಗೋಪಾಲಕೃಷ್ಣ ಶೆಟ್ಟಿಗಾರ್ ಕಾಡುಮನೆ, ಪದ್ಮಶಾಲಿ ಸಮಾಜ ಸೇವಾ ಸಂಘದ ಪ್ರಕಾಶ್ ಶೆಟ್ಟಿಗಾರ್ ನೀರಪಲ್ಕೆ, ಶಿಮಂತೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ. ಜೆ. ಶಿವರುದ್ರಪ್ಪ, ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿಗಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಗುಣಾ ಭಾಸ್ಕರ, ವಿಠಲ ಶೆಟ್ಟಿಗಾರ್, ಚರಣ್ ಕುಮಾರ್, ಹರಿರಾಜ ಕುಜಿಂಗಿರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-11061806

Comments

comments

Comments are closed.

Read previous post:
Kinnigoli-11061805
ಉಲ್ಲಂಜೆ : ಉಮಾನಾಥ ಕೋಟ್ಯಾನ್ ಸನ್ಮಾನ

ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉಲ್ಲಂಜೆ ಕೊರಗಜ್ಜ ಮಂತ್ರದೇವತೆ ಚಾಮುಂಡೇಶ್ವರೀ ಗುಳಿಗ ಸನ್ನಿಧಿಗೆ ಭೇಟಿ ನೀಡಿದ ಸಂದರ್ಭ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು....

Close