ತೋಕೂರು : ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಂಘ ಸಂಸ್ಥೆಗಳು ಮುನ್ನಡೆದಾಗ ಯಶ್ಸಸು ಸಾದ್ಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ತೋಕೂರು ಕುಲಾಲ ಸಮಾಜ ಸೇವಾ ಸಂಘ (ರಿ) ದ ಆಶ್ರಯದಲ್ಲಿ ತೋಕೂರು ಕುಲಾಲ ಜವನೆರ್ ಸಂಯೋಜನೆಯಲ್ಲಿ ವಿದ್ಯಾರ್ಥಿ ಸಹಾಯಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಸಂಘಟನೆಯಿಂದ ನಿರ್ದಿಷ್ಟ ಗುರಿ ತಲುಪಲು ಸಾದ್ಯ, ಸಂಘಟನೆಗಳು ಹಿರಿಯರ ಮಾರ್ಗದರ್ಶನದಿಂದ ಮುನ್ನಡೆಯಬೇಕು, ಮುಖ್ಯವಾಗಿ ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದರು. ದ,ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಕಾರ್ಯದರ್ಶಿ ಪ್ರಸಾದ್ ಕುಲಾಲ್ ಸಿದ್ದಕಟ್ಟೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ವಿಷಯದ ಬಗ್ಗೆ ಉಪಾನ್ಯಾಸ ನೀಡಿದ್ದರು.
ಈ ಸಂದರ್ಭ ಸುಮಾರು 65 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. 13 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷೆ ಲೀಲ ಬಂಜನ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ನ್ಯಾಯವಾದಿ ರಾಮ್ ಪ್ರಸಾದ್ ಎಸ್., ಸ್ವರ್ಣಕುಂಭ ವಿವಿಧ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಎಸ್ ಕುಲಾಲ್, ಎಂ. ಜಿ.ರಾಮಣ್ಣ ಮತ್ತಿತರರು ಇದ್ದರು.
ಉಮೇಶ್ ಬಂಗೇರ ಸ್ವಾಗತಿಸಿದರು. ಉದಯಕುಮಾರ್ ವರದಿ ವಾಚಿಸಿದರು. ಹೇಮಂತ್ ಕುಮಾರ್ ವಂದಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.

Kinnigoli-11061807

Comments

comments

Comments are closed.

Read previous post:
Kinnigoli-11061806
ಪುನರೂರು: ಯುವಕ ಮಂಡಲ ಪುಸ್ತಕ ವಿತರಣೆ

ಕಿನ್ನಿಗೋಳಿ : ತಾಳಿಪಾಡಿ ಪುನರೂರು ಶ್ರೀ ವೀರಭದ್ರ ಯುವಕ ಮಂಡಲ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ 26 ನೇ ವರ್ಷದ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನವನ್ನು...

Close