9ನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವ

ಕಿನ್ನಿಗೋಳಿ : ಅಭಿವೃದ್ಧಿ ನೆಪ, ಕೃಷಿ ಬಗ್ಗೆ ಅನಾಸಕ್ತಿ, ಕಾರ್ಮಿಕರ ಕೊರತೆ ಹಾಗೂ ಧನ ದಾಹದಿಂದ ಕೃಷಿ ಭೂಮಿ ಕಡಿಮೆಯಾಗುತ್ತಿರುವುದು ಖೇದನೀಯ. ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಜ್ಞಾನ ಹೊಂದಲು ಇಂತಹ ಜನಪದ ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳ ವಠಾರದ ಬಾಕಿಮಾರು ಗದ್ದೆಯಲ್ಲಿ 9ನೇ ವರ್ಷ ತುಳುನಾಡ ಕೃಷಿ ಜನಪದೋತ್ಸವದ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು.
ದೇವಳದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಳದ ಕಾಂತಣ್ಣ ಯಾನೆ ರತ್ನಾಕರ ಶೆಟ್ಟಿಗಾರ್, ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನರೇಂದ್ರ ಪ್ರಭು, ವಿದ್ಯಾ ವಿನಾಯಕ ಯುವಕ ಮಂಡಲದ ಸಲಹಾ ಸಮಿತಿಯ ಮಹಾಬಲ ಅಂಚನ್, ಮೋಹನ್ ಬಂಗೇರ ಕೊಳುವೈಲು, ಎಚ್.ರಾಮಚಂದ್ರ ಶೇಣೈ, ಯತೀಶ್ ಕೋಟ್ಯಾನ್, ಸದಾಶಿವ ಕರ್ಕೇರ, ಶೋಭೇಂದ್ರ ಸಸಿಹಿತ್ಲು, ಬೆಳ್ಳಾಯರು ಹಿಂದೂಸ್ತಾನಿ ಯೂತ್ ಕ್ಲಬ್ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಹಳೆಯಂಗಡಿ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್ ಸ್ವಾಗತಿಸಿದರು, ಯೋಗೀಶ್ ಪಾವಂಜೆ ವಂದಿಸಿದರು, ತೋಕೂರು ಯುವಕ ಸಂಘದ ಮಾಜಿ ಅಧ್ಯಕ್ಷ ಹರಿದಾಸ್ ಭಟ್ ನಿರೂಪಿಸಿದರು.

ಕೃಷಿ ಜನಪದೋತ್ಸವಕ್ಕೆ ಪಾವಂಜೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವಿಶೇಷ ಪ್ರಾರ್ಥನೆ ನಡೆದು ಕ್ರೀಡೋತ್ಸವ ನಡೆಯುವ ಬಾಕಿಮಾರು ಗದ್ದೆಗೆ ಹಾಲು ಎರೆಯುವ ಮೂಲಕ ದೇವಳದ ಧರ್ಮದರ್ಶಿ ಯಾಜಿ ಡಾ.ನಿರಂಜನ್ ಭಟ್ ಅವರು ನೆರವೇರಿಸಿದರು.
* ವಿದ್ಯಾರ್ಥಿ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 18 ವಿವಿಧ ಶಾಲೆಯ 1210 ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸಿದ್ದರು. ಹಗ್ಗ ಜಗ್ಗಾಟದ ಗುಂಪು ಸ್ಪರ್ಧೆಯಲ್ಲಿ ಪ್ರಾಥಮಿಕ ಮತ್ತು ಫ್ರೌಢಶಾಲಾ ವಿಭಾಗದಲ್ಲಿ 21 ತಂಡಗಳು ಪಾಲ್ಗೊಂಡವು.
* ಸ್ಥಳೀಯ 25 ಸಂಘ ಸಂಸ್ಥೆಗಳು ಸ್ವಯಂ ಸೇವಕರಾಗಿ ವಿವಿಧ ಜವಬ್ದಾರಿಯನ್ನು ನಿರ್ವಹಿಸಿದರು. ಭಾಗವಹಿಸಿದ ಎಲ್ಲರಿಗೂ ಫಲಹಾರ ಮತ್ತು ಊಟೋಪಚಾರವನ್ನು ವಿತರಿಸಲಾಯಿತು.
* ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಶಿಕ್ಷಕ ಜಗದೀಶ್ ಅವರು ಸ್ಪರ್ಧೆಯ ಮೊದಲು ಯೋಗವನ್ನು ಮಕ್ಕಳಿಗೆ ತಿಳಿ ಹೇಳಿದರು.

Kinnigoli-16061803 Kinnigoli-16061804 Kinnigoli-16061805 Kinnigoli-16061806

Comments

comments

Comments are closed.

Read previous post:
Kinnigoli-16061802
ಹಳೆಯಂಗಡಿಯ ಹೆದ್ದಾರಿ ಚರಂಡಿ ಅವೈಜ್ಞಾನಿಕ 

ಕಿನ್ನಿಗೋಳಿ : ಹಳೆಯಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನವಯುಗ್ ಸಂಸ್ಥೆ ಅಳವಡಿಸಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಪರಿಸರದ ಜಮೀನಿಗೆ ಇದರಿಂದ ಹಾನಿಯಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್...

Close