ಹಳೆಯಂಗಡಿಯ ಹೆದ್ದಾರಿ ಚರಂಡಿ ಅವೈಜ್ಞಾನಿಕ 

ಕಿನ್ನಿಗೋಳಿ : ಹಳೆಯಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನವಯುಗ್ ಸಂಸ್ಥೆ ಅಳವಡಿಸಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಪರಿಸರದ ಜಮೀನಿಗೆ ಇದರಿಂದ ಹಾನಿಯಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು
ಪರಿಶೀಲನೆ ನಡೆಸಿ ಹೇಳಿದರು.
ಹಳೆಯಂಗಡಿ ಹೆದ್ದಾರಿಯಲ್ಲಿ ನವಯುಗ್ ಸಂಸ್ಥೆಯು ನಿರ್ಮಿಸಿದ ಚರಂಡಿಗಳನ್ನು ವೀಕ್ಷಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಸಿರುವ ಚತುಷ್ಪಥ ಕಾಮಗಾರಿ ತಾಂತ್ರಿಕತೆಯಿಂದ ನಡೆಸಿಲ್ಲ, ಈ ವರ್ಷದಲ್ಲಿ ಹಳೆಯಂಗಡಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಚರಂಡಿಗಳು ಸಹ ಅವೈಜ್ಞಾನಿಕ ರೀತಿಯಲ್ಲಿದೆ. ಹೆದ್ದಾರಿ ಬಳಿಯ ಶಿವರಾಯ ಶೆಣೈ ಅವರ ಮನೆ ಹತ್ತಿರ ನಿರ್ಮಾಣ ಮಾಡಿರುವ ಚರಂಡಿಯ ಸುತ್ತಮುತ್ತ ಸಿಮೆಂಟ್‌ನ ಮೂಲಕ ಕಲ್ಲುಗಳನ್ನು ಕಟ್ಟಿರುವುದರಿಂದ ಚರಂಡಿಯ ಪಕ್ಕದಲ್ಲಿರುವ ಶಿವರಾಯ ಶೆಣೈ ಅವರ ಮನೆಗೆ ನೇರವಾಗಿ ಮಳೆ ನೀರು ಹರಿಯುತ್ತಿದೆ. ಮೋರಿಯಲ್ಲಿ ಪೈಪ್‌ಗಳನ್ನು ಹಾಕಿರುವ ಕ್ರಮವೇ ಸರಿಯಗದೇ ನೀರು ಸರಾಗವಾಗಿ ಹರಿಯದೆ ಪಕ್ಕದ ಮನೆಗಳಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗಿದೆ.
ಇಂತಹ ಪರಿಸ್ಥಿತಿ ಹಳೆಯಂಗಡಿ ನಾರಾಯಣಗುರು ರಸ್ತೆಯ ಬಳಿ, ಪಾವಂಜೆಯ ಬಳಿ ಹಾಗೂ ಬಸ್ ನಿಲ್ದಾಣದ ಬಳಿ ನಿರ್ಮಾಣವಾಗಿದೆ. ಚರಂಡಿಯಲ್ಲಿನ ನೀರು ಸರಾಗವಾಗಿ ಹರಿಯಲು ಸೂಕ್ತವಾದ ವ್ಯವಸ್ಥೆಯನ್ನೇ ಮಾಡಿಲ್ಲ ಕೇವಲ ಚರಂಡಿ ಬಳಿ ಕಲ್ಲುಗಳನ್ನು ಕಟ್ಟಿದ್ದಾರೆ, ಚರಂಡಿಯ ಮೂಲಕ ಹರಿದ ನೀರು ಎಲ್ಲಿಗೆ ಹೋಗಬೇಕು ಎಂಬುದಕ್ಕೆ ದಾರಿ ಮಾಡಿಕೊಟ್ಟಿಲ್ಲ. ಈ ಬಗ್ಗೆ ಕಂಪೆನಿಯ ಕಾರ್ಮಿಕರಿಗೆ ತಿಳಿಸಿದರೂ ಪ್ರಯೋಜನ ಇಲ್ಲವಾಗಿದೆ ದ.ಕ. ಸಂಸದ ನಳಿನ್‌ಕುಮಾರ್ ಕಟೀಲು ಮತ್ತು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಗಮನಕ್ಕೆ ತಂದು ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು. ಈ ಸಂದರ್ಭ ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸುಕೇಶ್ ಪಾವಂಜೆ ಇದ್ದರು.

Kinnigoli-16061802

Comments

comments

Comments are closed.

Read previous post:
Kinnigoli-16061801
ಕಿನ್ನಿಗೋಳಿ ಲಯನ್ಸ್ ಕ್ಲಬ್ ಡೋನಿ ಮಿನೇಜಸ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್ ಕ್ಲಬ್ ನ 2018-19 ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಡೋನಿ ಮಿನೇಜಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಹಿಲ್ಡಾ ಡಿಸೋಜ, ಕೋಶಾಧಿಕಾರಿ ಜೋಸೆಫ್ ಮಿನೇಜಸ್, ಪ್ರಥಮ ಉಪಾಧ್ಯಕ್ಷರಾಗಿ ಉದ್ಯಮಿ ಮ್ಯಾಕ್ಸಿಮ್...

Close