ಅಂಗರಗುಡ್ಡೆ : ಸ್ವಚ್ಚತೆ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ, ಭಗತ್ ಸಿಂಗ್ ಯುವಕ ವೃಂದ ಅಂಗರಗುಡ್ಡೆ, ಶ್ರೀ ರಾಮಭಜನಾ ಮಂದಿರ ಅಂಗರಗುಡ್ಡೆ, ಜಲಾನಯನ ಸಹಿತ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಅಂಗರಗುಡ್ಡ ಮಸೀದಿಯಿಂದ ಕೆಂಚನಕೆರೆ ಮುಖ್ಯರಸ್ತೆ ತನಕ ಶ್ರಮದಾನದ ಮೂಲಕ ರಸ್ತೆಯ ಬದಿಯ ಪೊದೆ ಗಿಡಗಳು ತೆಗೆದು ಸುಗಮ ಸಂಚಾರಕ್ಕೆ ವ್ಯವಸ್ಥೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಕುಲಾಲ್ , ಪಿಡಿಒ ಹರಿಶ್ಚಂದ್ರ, ಸ್ವಸಹಾಯ ಸಂಘದ ತಾರಾನಾಥ ದೇವಾಡಿಗ , ಸತೀಶ್ ಪೂಜಾರಿ, ಶಶಿ ಆಚಾರ್ಯ, ರಾಮ ಮಂದಿರದ ಜೀವನ್ ಶೆಟ್ಟಿ, ಗೋಕುಲ್‌ದಾಸ್ ಕಾಮತ್, ಸುಂದರ ಕೆರೆಕಾಡು, ಪ್ರಶಾಂತ್ ಕೋಟ್ಯಾನ್, ಯೋಗೀಶ್ ಆಚಾರ್ಯ, ರಮೇಶ್, ತಾರನಾಥ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-76061803

Comments

comments

Comments are closed.