ಪಾವಂಜೆ : ಕೆಸರುಗದ್ದೆ ಓಟ

ಕಿನ್ನಿಗೋಳಿ: ಅನಾದಿ ಕಾಲದಿಂದಲೂ ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ಕೃಷಿ ಪರಂಪರೆಯನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ ಹಾಗೂ ಧರ್ಮ. ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ಕೆಲಸ ಕಾರ್ಯಗಳನ್ನು ಕೈಗೊಂಡಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದ ಧರ್ಮದರ್ಶಿ ಯಾಜಿ ಡಾ.ನಿರಂಜನ್ ಭಟ್ ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದ ವಠಾರದ ಬಾಕಿಮಾರು ಗದ್ದೆಯಲ್ಲಿ ನಡೆದ ತುಳುನಾಡ ಕೃಷಿ ಜನಪದೋತ್ಸವದ ಸ್ಪರ್ಧಾ ಕಾರ್ಯಕ್ರಮದಲ್ಲಿ ಶಾಲಾ ವಿಭಾಗದ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ತೋಕೂರು ಯುವಕ ಸಂಘದ ಅಧ್ಯಕ್ಷ ಹೇಮಂತ್ ಅಮೀನ್, ಕೃಷ್ಣಪ್ಪ ದೇವಾಡಿಗ, ಸದಾನಂದ ಗಾಂಭೀರ್, ಜಗನ್ನಾಥ ಕರ್ಕೇರ, ದಿವ್ಯಶ್ರಿ ರಮೇಶ್ ಕೋಟ್ಯಾನ್, ಬೋಳ ಕೃಷ್ಣ ರಾವ್, ದಾಮೋದರ್ ಶೆಟ್ಟಿ ತೋಕೂರು, ವಿದ್ಯಾಶ್ರಿ ರಮೇಶ್ ಕೋಟ್ಯಾನ್, ರಶ್ಮಿ, ಪುರುಷೋತ್ತಮ ಕೋಟ್ಯಾನ್ ತೋಕೂರು, ಮಹಾಬಲ ಅಂಚನ್, ಸೋಮನಾಥ ದೇವಾಡಿಗ, ಪರಮೇಶ್ವರ ಪೂಜಾರಿ ತೋಕೂರು, ಯತೀಶ್ ಕೋಟ್ಯಾನ್, ಎಚ್.ರಾಮಚಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆಮಾರ್ ಸ್ವಾಗತಿಸಿದರು. ಸುಧಾಕರ್ ಆರ್. ಅಮೀನ್ ವಿಜೇತರ ಪಟ್ಟಿ ವಾಚಿಸಿದರು. ವಿನೋದ್ ಎಸ್. ಸಾಲ್ಯಾನ್ ಪ್ರಸ್ತಾವನೆಗೈದರು. ಯೋಗೀಶ್ ಪಾವಂಜೆ ವಂದಿಸಿದರು. ಹರಿದಾಸ್ ಭಟ್ ತೋಕೂರು ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ:
ಕೆಸರುಗದ್ದೆ ಓಟ : ಪ್ರಾಥಮಿಕ ಶಾಲಾ (ಸಬ್ ಜೂನಿಯರ್)
ಬಾಲಕರು: ಶರಣ್ ಕೆರೆಕಾಡು ಶಾಲೆ(ಪ್ರ), ಮೋದಕ್ ಸುಬ್ರಹ್ಮಣ್ಯ ತೋಕೂರು(ದ್ವಿ).
ಬಾಲಕಿಯರು : ಸಾನ್ವಿ ಸುಬ್ರಹ್ಮಣ್ಯ ತೋಕೂರು(ಪ್ರ), ದಿವ್ಯಾ ಸುಬ್ರಹ್ಮಣ್ಯ ಶಾಲೆ ತೋಕೂರು (ದ್ವಿ). (ಜೂನಿಯರ್)
ಬಾಲಕರು: ಹರ್ಷಲ್ ಎನ್‌ಐಟಿಕೆ ಸುರತ್ಕಲ್ (ಪ್ರ), ಚೇತನ್ ವ್ಯಾಸ ಮಹರ್ಷಿ ಮೂಲ್ಕಿ (ದ್ವಿ)
ಬಾಲಕಿಯರು: ವೈಷ್ಣವಿ ಕೆರೆಕಾಡು (ಪ್ರ), ಲಾವಣ್ಯ ಪಡುಪಣಂಬೂರು (ದ್ವಿ),
ಫ್ರೌಢಶಾಲಾ ವಿಭಾಗ
ಬಾಲಕರು: ತಿಲಕ್ ವಿದ್ಯಾದಾಯಿನಿ ಸುರತ್ಕಲ್ (ಪ್ರ), ಕೀರ್ತನ್ ವಿದ್ಯಾದಾಯಿನಿ ಸುರತ್ಕಲ್ (ದ್ವಿ),
ಬಾಲಕಿಯರು: ವಿಶಾಖಾ ಕೆನರಾ ಊರ್ವ(ಪ್ರ), ಶ್ರಾವಣಿ ಎಸ್‌ಡಿಪಿಟಿ ಕಟೀಲು(ದ್ವಿ),

ಹಿಮ್ಮುಖ ಓಟ (ಸಬ್ ಜ್ಯೂನಿಯರ್)
ಬಾಲಕರು : ತನ್ವಿ ಸಿಎಸ್‌ಐ ಕಾರ್ನಾಡ್ (ಪ್ರ), ಶರಣ್ ಕೆರೆಕಾಡು (ದ್ವಿ),
ಬಾಲಕಿಯರು : ಸಾನ್ವಿ ಸುಬ್ರಹ್ಮಣ್ಯ ತೋಕೂರು (ಪ್ರ), ಸಫ್ನಾಝ್ ಸಿಎಸ್‌ಐ ಕಾರ್ನಾಡು (ದ್ವಿ).
(ಜ್ಯೂನಿಯರ್)
ಬಾಲಕರು : ಶೋಧನ್ ಎನ್‌ಐಟಿಕೆ ಸುರತ್ಕಲ್(ಪ್ರ), ರಿಜು ಎನ್‌ಐಟಿಕೆ ಸುರತ್ಕಲ್ (ದ್ವಿ),
ಬಾಲಕಿಯರು : ಮೋಕ್ಷಾ ಸುಬ್ರಹ್ಮಣ್ಯ ತೋಕೂರು (ಪ್ರ), ವೈಷ್ಣವಿ ಕೆರೆಕಾಡು (ದ್ವಿ).

ಫ್ರೌಢಶಾಲಾ ವಿಭಾಗ
ಬಾಲಕರು ರಾಕೇಶ್ ಚೇಳ್ಯಾರು (ಪ್ರ), ಗೌತಮ್ ಎನ್‌ಐಟಿಕೆ ಸುರತ್ಕಲ್ (ದ್ವಿ),
ಬಾಲಕಿಯರು : ಚಾರ್ಲಿ ಸರಸ್ವತಿ ಸಿಎಸ್‌ಐ ಕಾರ್ನಾಡು (ಪ್ರ), ಲವೀಶಾ ಸಿಎಸ್‌ಐ ಕಾರ್ನಾಡು (ದ್ವಿ).
ಹಗ್ಗಜಗ್ಗಾಟ :
ಪ್ರಾಥಮಿಕ ಬಾಲಕರು: ಎನ್‌ಐಟಿಕೆ ಸುರತ್ಕಲ್ (ಪ್ರ), ವ್ಯಾಸ ಮಹರ್ಷಿ ಮೂಲ್ಕಿ (ದ್ವಿ),
ಬಾಲಕಿಯರು : ವ್ಯಾಸ ಮಹರ್ಷಿ ಮೂಲ್ಕಿ (ಪ್ರ), ಸುಬ್ರಹ್ಮಣ್ಯ ತೋಕೂರು (ದ್ವಿ).

ಫ್ರೌಢಶಾಲೆ ವಿಭಾಗ ಬಾಲಕರು : ವಿದ್ಯಾದಾಯಿನಿ ಸುರತ್ಕಲ್ (ಪ್ರ), ಎಸ್‌ಡಿಪಿಐ ಕಟೀಲು (ದ್ವಿ),
ಬಾಲಕಿಯರು : ಎಸ್‌ಡಿಪಿಐ ಕಟೀಲು (ಪ್ರ), ಕೆನರಾ ಫ್ರೌಢಶಾಲೆ ಉರ್ವ(ದ್ವಿ).

ಜಾನಪದ ಸಮೂಹ ನೃತ್ಯ
ಪ್ರಾಥಮಿಕ ವಿಭಾಗ : ಸುಬ್ರಹ್ಮಣ್ಯ ತೋಕೂರು.
ಫ್ರೌಢಶಾಲೆ : ವಿದ್ಯಾದಾಯಿನಿ ಸುರತ್ಕಲ್.

Kinnigoli-76061801

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆದ ಶಾಲಾ ಮಕ್ಕಳ ವಿಭಾಗದ ಫ್ರೌಢಶಾಲಾ ವಿಭಾಗದಲ್ಲಿ ಬಾಲಕರಲ್ಲಿ ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾದಾಯಿನಿ ಸುರತ್ಕಲ್ ತಂಡ.

Kinnigoli-76061802

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆದ ಶಾಲಾ ಮಕ್ಕಳ ವಿಭಾಗದ ಫ್ರೌಢಶಾಲಾ ವಿಭಾಗದಲ್ಲಿ ಬಾಲಕಿಯರಲ್ಲಿ ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಎಸ್‌ಡಿಪಿಐ ಕಟೀಲು ತಂಡ.

Comments

comments

Comments are closed.

Read previous post:
Kinnigoli-76061805
ಪಾವಂಜೆ ರೋಹಿಣಿ

ಕಿನ್ನಿಗೋಳಿ: ಕಿನ್ನಿಗೋಳಿಯ ಎಸ್. ಕೋಡಿ ಪುನರೂರು ವಾಸುದೇವ ಅಗ್ರಹಾರ ನಿವಾಸಿ ಬಿ. ಎಸ್. ಎನ್ ಎಲ್ ನಿವೃತ್ತ ಉದ್ಯೋಗಿ ಪಾವಂಜೆ ರೋಹಿಣಿ (78) ಅವರು ಭಾನುವಾರ ನಿಧನ ಹೊಂದಿದರು....

Close